ಉ.ಕ ಸುದ್ದಿಜಾಲ ಅಥಣಿ :

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಖೀಳೆಗಾಂವ ಗ್ರಾಮದ
ಮಿಠಾಯಿ ಅಂಗಡಿಯಲ್ಲಿ ಕೆಲಸಕ್ಕೆ ಹೋಗಿದ್ದ ವ್ಯಕ್ತಿಯೋರ್ವ ಕಾಣೆಯಾಗಿದ್ದಾನೆ ಎಂದು ಕಾಣೆಯಾದ ವ್ಯಕ್ತಿಯ ಪತ್ನಿ ರೇಣುಕಾ ಸವದತ್ತಿ ಅಥಣಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ಕಾಗವಾಡ ತಾಲೂಕಿನ ಐನಾಪುರ ಗ್ರಾಮದ ಮಹಾವೀರ ಅಪ್ಪಣ್ಣ ಸವದತ್ತಿ (45) ಕಾಣೆಯಗಿರುವ ವ್ಯಕ್ತಿ. ಒಂದು ತಿಂಗಳ ಹಿಂದೆ ಕೆಲಸಕ್ಕೆ ಹೋಗಿದ್ದ ಮಹಾವೀರ ಸೆಪ್ಟಂಬ‌ರ್ 3 ರಂದು ಅಂಗಡಿ ಮಾಲೀಕರಿಗೆ ಮನೆಗೆ ಹೋಗುತ್ತೇನೆಂದು ಹೇಳಿ ಹೋಗಿ ಕಾಣೆಯಾಗಿದ್ದಾರೆಂದು ದೂರಿನಲ್ಲಿ ದಾಖಲಿಸಲಾಗಿದೆ.

5.6 ಅಡಿ ಎತ್ತರ, ಗೋಧಿಗೆಂಪು ಮೈಬಣ್ಣ ಹೊಂದಿರುವ ಮಹಾವೀರ ಕೇಸರಿ ಬಣ್ಣದ ಶರ್ಟ, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು ಕನ್ನಡ ಭಾಷೆ ಮಾತನಾಡುತ್ತಾನೆ.

ಯಾರಿಗಾದರೂ ಈತನ ಮಾಹಿತಿ ದೊರೆತಲ್ಲಿ ಅಥಣಿ ಪೊಲೀಸ್ ಠಾಣೆ ದೂ. ಸಂಖ್ಯೆ
08289-251133 9480804062 ಗೆ ಸಂಪರ್ಕಿಸುವಂತೆ ಅಥಣಿ ಪೊಲೀಸರು ಕೋರಿದ್ದಾರೆ.