ಉ.ಕ ಸುದ್ದಿಜಾಲ ಬೆಳಗಾವಿ :

ಬೆಳಗಾವಿಯ ರಿಯಲ್ ಎಸ್ಟೇಟ್ ‌ಉದ್ಯಮಿಯ ಸಾವು ಸಹಜವಲ್ಲ, ಕೊಲೆ, ಫೇಸ್ಬುಕ್ ಗೆಳೆಯನಿಂದಲೇ ಕೋಟ್ಯಾಧಿಪತಿ ಗಂಡನ ಚಟ್ಟ ಕಟ್ಟಿದ್ಲಾ ಪತ್ನಿ? ಬೆಳಗಾವಿಯ ಆಂಜನೇಯ‌ ನಗರದ ನಿವಾಸಿ ಸಂತೋಷ ‌ಪದ್ಮನ್ನವರ ಕೊಲೆಯಾದ ಉದ್ಯಮಿ.

ಸಂತೋಷ ತನ್ನ ಪತ್ನಿ ಉಮಾಗೆ ನಿರಂತರ ‌ಕಿರುಕುಳ ಜೊತೆಗೆ ಸಂಶಯ ಪಡ್ತಿದ್ದ ಈ ಕಾರಣಕ್ಕೆ ‌ಜೀಗುಪ್ಸೆಗೊಂಡು ಫೆಸ್ಬುಕ್ ಗೆಳೆಯನ ಮೂಲಕ ಸಂತೋಷ ಕೊಲೆ? ಕುಡಿಯುವ ನೀರಿನ ಗ್ಲಾಸ್‌ನಲ್ಲಿ ನಿದ್ರೆ ಮಾತ್ರೆ ಬೆರೆಸಿ ಕೃತ್ಯ ಎಸಗಿದ್ದ ಆರೋಪಿಗಳು

ನಿದ್ರೆ ಮಾತ್ರೆ ಮಿಶ್ರಣದ ನೀರು ಕುಡಿದು ಪ್ರಜ್ಞೆ ತಪ್ಪಿದ್ದ ಉದ್ಯಮಿ ಸಂತೋಷ ಪದ್ಮನ್ನವರ ಬಳಿಕ ಫೆಸ್ಬುಕ್ ಗೆಳೆಯ, ಮನೆ ಕೆಳಸದವರು ಸೇರಿ ಪಿಲ್ಲೋದಿಂದ ಉಸಿರುಗಟ್ಟಿಸಿ ಸಂತೋಷ ಕೊಲೆ

ಸಂತೋಷ ‌ಉಸಿರು ಚೆಲ್ತಿದ್ದಂತೆ ಹೃದಯಾಘಾತದಿಂದ ‌ಮೃತನಾಗಿದ್ದಾನೆಂದು ಕಥೆ ಕಟ್ಟಿದ್ದ ಪತ್ನಿ ಉಮಾ, ಉಮಾ‌ ಮಾತು ನಂಬಿ ಸಂತೋಷ ಅಂತ್ಯಕ್ರಿಯೆ ‌ನಡೆಸಿದ್ದ ಸಂಬಂಧಿಕರು, ಸ್ಥಳೀಯರು

ಅಕ್ಟೋಬರ್ 9 ರಂದು ನಡೆದಿದ್ದ ಸಹಜ ಸಾವು ಪ್ರಕರಣ ಕೊಲೆ ಎಂಬುದು ಪ್ರಾಥಮಿಕ ‌ತನಿಖೆಯಲ್ಲಿ ಗೊತ್ತಾಗಿದೆ.