ಉ.ಕ ಸುದ್ದಿಜಾಲ ಅಥಣಿ :
ಕಳೆದ ರಾತ್ರಿ ಸುರಿದ ಭಾರಿ ಪ್ರಮಾಣದ ಮಳೆಯಿಂದಾಗಿ ಉತ್ತರ ಕರ್ನಾಟಕ ದೇವತೆ ಎಲ್ಲಮ್ಮನ ದೇವಸ್ಥಾನದ ಗರ್ಭಗುಡಿಗೆ ನೀರು ನುಗ್ಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಲ್ಲಮ್ಮನವಾಡಿ ಗ್ರಾಮದಲ್ಲಿ ಇರುವ ಕೊಕಟನೂರು ಎಲ್ಲಮ್ಮ ದೇವಿಯ ದರ್ಶನಕ್ಕೆ ಅಪಾರ ಪ್ರಮಾಣದಲ್ಲಿ ಭಕ್ತರು ಬರುವಂತದ್ದು ಅದರಲ್ಲೂ ಕೂಡ ಹುಣ್ಣಿಮೆಯ ಮುನ್ನಾದಿನವೇ ದೇವಸ್ಥಾನಕ್ಕೆ ನೀರು ನುಗ್ಗಿದೆ.
ನಾಳೆ ನಡೆಯಬೇಕಿದ್ದ ದೇವಿ ಪೂಜೆಗೆ ಮಹಾರಾಷ್ಟ್ರ ಮತ್ತು ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಿದ್ದ ಭಕ್ತರಿಗೆ ಸದ್ಯ ದೇವಿ ದರ್ಶನಕ್ಕೆ ವಿಘ್ನ ಎದುರಾಗಿದೆ.