ಉ.ಕ ಸುದ್ದಿಜಾಲ ವಿಜಯಪುರ :
ಸಚಿವ ಮುರುಗೇಶ್ ನಿರಾಣಿ ವಿಜಯಪುರ ಕಾರು ಚಾಲಕ ಹತ್ಯೆ ಆರೋಪ ಹಿನ್ನಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವ್ರಿಗೆ ಪತ್ರ ಬರೆದ ವಿಜಯಪೂರ ಶಾಸಕ ಬಸವನಗೌಡ ಯತ್ನಾಳ ಸಿಬಿಐ ತನಿಖೆಗೆ ಆಗ್ರಹಿಸಿ ಪತ್ರ ಬರೆದಿದ್ದಾರೆ.
ಒಬ್ಬ ಚಾಲಕನ ಹತ್ಯೆಯಾಗಿರುವ ಬಗ್ಗೆ ಸಂಪುಟ ದರ್ಜೆ ಸಚಿವರೊಬ್ಬರು ಮಾಡಿರುವ ಆರೋಪ. ಈ ಬಗ್ಗೆ ಸಿಬಿಐ ತನಿಖೆಗೊಳಪಡಿಸಿ ಎಂದು ಒತ್ತಾಯಿಸಿ ಯತ್ನಾಳ ಪತ್ರ ಬರೆದಿದ್ದಾರೆ.
ಸಚಿವ ಮುರುಗೇಶ್ ನಿರಾಣಿ ಹೆಸರು ಪ್ರಸ್ತಾಪಿಸದೇ ಸಿಎಂಗೆ ಪತ್ರ ಬರೆಯಲಾಗಿದೆ. ತಮ್ಮ ಸಚಿವ ಸಂಪುಟದ ಸಚಿವರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಇಂತಹ ಸುಳ್ಳು ಆರೋಪದಿಂದ ಜನತೆಗೆ ತಪ್ಪು ಸಂದೇಶ ರವಾನೆಯಾಗುತ್ತದೆ.

ದೇಶದ ಎಲ್ಲಾ ಜನತೆಗೆ ಸತ್ಯಾಸತ್ಯತೆ ಗೊತ್ತಾಗಬೇಕು ಕೇಂದ್ರ ರಾಜ್ಯದಲ್ಲಿ ನಮ್ಮದೇ ಸರಕಾರವಿದೆ. 24ಗಂಟೆಯೊಳಗೆ ಸಿಬಿಐಗೆ ವಹಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿ ಎಂದು ಸಿಎಂ ಬೊಮ್ಮಾಯಿಗೆ ಪತ್ರ
ಸುಳ್ಳು ಆರೋಪಿಸಿ ಜನತೆಗೆ ತಪ್ಪು ಸಂದೇಶ ನೀಡುವ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೂ ಆಗ್ರಹಿಸಿದ ವಿಜಯಪೂರ ನಗರ ಶಾಸಕ ಬಸವರಾಜ ಯತ್ನಾಳ.