ಉ.ಕ ಸುದ್ದಿಜಾಲ ವಿಜಯಪುರ :
ಗುಮ್ಮಟನಗರಿ ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನದ ಅನುಭವಾಗಿದೆಮ ತಿಕೋಟಾ ಪಟ್ಟಣ ಸೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಕಂಪನ ಅನುಭವ.
ವಿಜಯಪೂರ ಜಿಲ್ಲೆಯ ಕಳ್ಳಕವಟಗಿ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ, ಘೋಣಸಗಿ, ಬಾಬಾನಗರ, ಟಕ್ಕಳಕಿ, ಹುಬನೂರ ಈ ಎಲ್ಲ ಗ್ರಾಮಗಳಲ್ಲಿ ಭೂಕಂಪನದ ಅನುಭವಾಗಿದೆ. ರಾತ್ರಿ ಸುಮಾರು 10.32 ರ ಸುಮಾರಿಗೆ ಭಯಾನಕ ಕಂಪನದ ಅನುಭವ.
ಸ್ಪೋಟದ ರೀತಿಯಲ್ಲಿ ಕೇಳಿ ಬಂದ ಜೋರಾದ ಶಬ್ಧದ ಜೊತೆಗೆ ಕಂಪನದ ಅನುಭವ. ಭಯಾನಕ ಸದ್ದಿಗೆ ಹೆದರಿ ಹೊರಗೆ ಓಡಿ ಬಂದ ಜನ. ಈ ಹಿಂದಿನಿಗಿಂತಲೂ ಅತಿ ಭಯಾನಕವಾಗಿ ಕೇಳಿ ಬಂದ ಸ್ಪೋಟದ ರೀತಿಯ ಸದ್ದು ಹಾಗೂ ಕಂಪನ ಅನುಭವ. ಭೂಕಂಪನ ಸದ್ದಿಗೆ ಮೂಖ ಪ್ರಾಣಿಗಳ ಜೋರಾಗಿ ಕೂಗಿದ್ದರಿಂದ ಜನರು ಭಯಭೀತರಾಗಿ ಹೊರಗೆ ಬಂದಿದ್ದಾರೆ.