ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿಯ ಹಿಂಡಲಗಾ ಸೆಂಟ್ರಲ್ ಜೈಲಿನ ಕೈದಿಯಿಂದ ಕೇಂದ್ರ ಸಚಿವ ನಿತೀನ್ ಗಡ್ಕರಿಗೆ ಜೀವ ಬೆದರಿಕೆ. ನಿತೀನ್ ಗಡ್ಕರಿ ಮೊಬೈಲ್‌ಗೆ ಫೋನ್ ಮಾಡಿ ಜೀವ ಬೆದರಿಕೆ ಹಾಕಿರುವ ಕೈದಿ. ಬೆದರಿಕೆ ಬಗ್ಗೆ ಮಹಾರಾಷ್ಟ್ರದ ನಾಗ್ಪುರ ಪೊಲೀಸರ ಗಮನಕ್ಕೆ ತಂದಿರುವ ನಿತೀನ ಗಡ್ಕರಿ.
ಆರೋಪಿ ಶೋಧಕ್ಕೆ ಹಿಂಡಲಗಾ ಜೈಲಿಗೆ ಬಂದಿರುವ ನಾಗ್ಪುರ ಪೊಲೀಸರು. ನಾಗ್ಪುರ ಪೊಲೀಸರಿಗೆ ಕೊಲ್ಲಾಪುರ, ಸಾಂಗ್ಲಿ ಬೆಳಗಾವಿ ನಗರ ಪೊಲೀಸರು ಸಾಥ ನೀಡಿದ್ದಾರೆ. ಸಂಜೆ ಮೂರು ಗಂಟೆಗಳ ಕಾಲ ಜೈಲಿನಲ್ಲಿ ಶೋಧ ಕಾರ್ಯ ನಡೆಸಿರುವ ಪೊಲೀಸರು.
ಗಡ್ಕರಿ ಅವರ ನಾಗ್ಪುರದ ಖಮ್ಲಾದಲ್ಲಿರುವ ಸಾರ್ವಜನಿಕ ಸಂಪರ್ಕ ಕಚೇರಿ ಸ್ಥಿರ ದೂರವಾಣಿಗೆ ಶನಿವಾರ ಬೆಳಗ್ಗೆ 11.25ಕ್ಕೆ, 11.32ಕ್ಕೆ ಹಾಗೂ ಮಧ್ಯಾಹ್ನ 12.30ಕ್ಕೆ ಹೀಗೆ ಮೂರು ಬಾರಿ ಕರೆ ಮಾಡಲಾಗಿದೆ. ತಾನು ಕರ್ನಾಟಕದಲ್ಲಿ ಇರುವುದಾಗಿ ಹೇಳಿಕೊಂಡ ಆರೋಪಿ ತನ್ನ ವಿಳಾಸ, ಮೊಬೈಲ್ ಸಂಖ್ಯೆ ಎಲ್ಲವನ್ನೂ ನೀಡಿದ್ದ ಎನ್ನಲಾಗಿದೆ.
ಇದರ ಜಾಡು ಹಿಡಿದು ತನಿಖೆಗೆ ಹೊರಟ ಪೊಲೀಸರಿಗೆ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಕರೆ ಹೋಗಿರುವುದು ತಿಳಿದು ಬಂದಿದ್ದು ಕರೆ ಮಾಡಿದಾತ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಆರೋಪಿ ಎಂದು ಗೊತ್ತಾಗಿದೆ.
ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪೊಲೀಸರು ಹಿಂಡಲಗಾ ಜೈಲಿಗೆ ಆಗಮಿಸಿ ತನಿಖೆ ಕೈಗೊಂಡಿದ್ದು ನಿತಿನ್ ಗಡ್ಕರಿ ಅವರ ಕಚೇರಿ ಹಾಗೂ ನಿವಾಸಕ್ಕೂ ಭದ್ರತೆ ಬಿಗುಗೊಳಿಸಲಾಗಿದೆ.
ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಂಗಳೂರು ಮೂಲದ ಎಂಬ ಆರೋಪಿಯಿಂದ ಕರೆ. ಸಹ ಕೈದಿಯಿಂದ ಮನೆ ಫೋನ್ ಮಾಡೋದಾಗಿ ಮೊಬೈಲ್ ಪಡೆದು ಬೆದರಿಕೆ. ಮಹಾರಾಷ್ಟ್ರದ ಮತ್ತು ಬೆಳಗಾವಿ ಪೊಲೀಸರಿಂದ ಮುಂದುವರೆದ ತನಿಖೆ.
ಇನ್ನೊಂದೆಡೆ ಜೈಲಿನಲ್ಲಿ ಕೈದಿಗೆ ಮೊಬೈಲ್ ಫೋನ್ ಬಳಕೆಗೆ ಅವಕಾಶ ಹೇಗೆ ಸಿಕ್ಕಿತು ಎಂಬ ಬಗ್ಗೆಯೂ ತನಿಖೆ ಮುಂದುವರೆದಿದೆ.
ಇಂದು ಜೈಲಿನಲ್ಲಿ ಶೋಧ ಕಾರ್ಯಾಚರಣೆ ಮುಂದುವರೆಯುವ ಸಾಧ್ಯತೆ. ಹಲವು ಸಲ ಸರ್ಪೈಸ್ ದಾಳಿಯಾದರೂ ಜೈಲಿನಲ್ಲಿ ನಿಲ್ಲುತ್ತಿಲ್ಲ ಮೊಬೈಲ್ ಬಳಕೆ.