ಉ.ಕ ಸುದ್ದಿಜಾಲ ಹುಕ್ಕೇರಿ :

ಬಿಜೆಪಿ ಆಫೀಸ್‌ನಲ್ಲಿ ಬಸವೇಶ್ವರ  ಹಾಗೂ ಅಂಬೇಡ್ಕರ್ ಜಯಂತಿ ಮಾಡುವುದಿಲ್ಲ. ಬಸವೇಶ್ವರ ಹಾಗೂ ಅಂಬೇಡ್ಕರ ವಿಚಾರಗಳ ವಿರುದ್ದ ಬಿಜೆಪಿ ಅವರು ಹೋರಾಟ ಮಾಡಿದ್ದಾರೆ. ಆರ್‌ಎಸ್‌ಎಸ್ ಕಚೇರಿಯಲ್ಲಿ ಬಸವೇಶ್ವರರ ಫೋಟೋ‌ ಹಾಕುವದಿಲ್ಲ. ಇನ್ನೂ ಅಂಬೇಡ್ಕರ ಭಾವಚಿತ್ರ ಅಳವಡಿಸುವದು ದೂರಿನ ಮಾತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಬಲಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಮತಕ್ಷೇತ್ರದ ಶಹಬಂದರ್ ಗ್ರಾಮದಲ್ಲಿ‌ ಸತೀಶ ಜಾರಕಿಹೊಳಿ ಭಾಷಣ ಮಾಡಿದ್ದಾರೆ ಬಿಜೆಪಿ ಆರ್ ಎಸ್ ಎಸ್ ಮನುವಾದಿಗಳೇ ಬಸವೇಶ್ವರನ್ನ ಖುರ್ಚಿ ಬಿಟ್ಟು ಇಳಿಸಿದ್ದಾರೆ. ಮನುವಾದಿಗಳು ಅಂಬೇಡ್ಕರ, ಶಿವಾಜಿ, ಶಾಹು ಮಹರಾಜರಿಗೆ ತೊಂದರೆ ಕೊಟ್ಟಿದ್ದಾರೆ. ಅಭಿವೃದ್ಧಿ ತೋರಿಸಿ ಬಿಜೆಪಿ ಅವರು ಹೋರಾಟ ಮಾಡಬೇಕಿದೆ.*

ಚಕ್ರವರ್ತಿ ಸೂಲಿಬೆಲೆ ವಿರುದ್ದ ಹರಿಹಾಯ್ದ ಸತೀಶ ಜಾರಕಿಹೊಳಿ :
ಸೂಲಿಬೆಲೆ ಅಂಥ ಸುಳ್ಳುಗಾರರನನ್ನ ಕರೆಸಿಕೊಂಡು ಭಾಷಣ ಮಾಡಿಸಿದರೇ, ಅದು ನಮ್ಮ‌ಜನರ ತಲೆಯಲ್ಲಿ ಹೋಗುವದಿಲ್ಲ. ಸೂಲಿಬೆಲೆ ಹಾಗೆ ಚೀರಾಡಿ‌ ಭಾಷಣ ಮಾಡುವವರು ನಮ್ಮ ಬಳಿಯೂ ಇದ್ದಾರೆ. ನಮಗೂ ಲಕ್ಸ್ ಸಾಬೂನು‌ ಹಚ್ಚಿ ತೊಳೆಯಲು ಬರುತ್ತೆ. ಧರ್ಮ ಜಾತಿ ಬಿಟ್ಟು ಅಭಿವೃದ್ದಿ ವಿಚಾರದಿಂದ ಚುನಾವಣೆಗೆ ಬನ್ನಿ.

ಚಕ್ರವರ್ತಿ ಸೂಲಿಬೆಲೆ ವಿರುದ್ದ ಹರಿಹಾಯ್ದ ಸತೀಶ ಜಾರಕಿಹೊಳಿ

ಅಣ್ಣಾಸಾಬ ಜೊಲ್ಲೆಗೆ ಕಿವಿ ಮಾತು :
ಮೋದಿ ಗಾಳಿಯಲ್ಲಿ ನೀವು ಸಂಸದರಾಗಿ ಅಣ್ಣಾಸಾಬ ಜೊಲ್ಲೆ ಆಯ್ಕೆ ಆಯ್ಕೆಯಾಗಿದ್ದೀರಿ. ನಿಮ್ಮದು ಸ್ವಂತ ಏನೂ ಇಲ್ಲ. ಎಸಿ ಬಿಟ್ಟು ನಮ್ಮ ಹಾಗೆ ಬಿಸಿಲಿನಲ್ಲಿ‌ ಬನ್ನಿ ಅಂದಾಗ ಜನ ಒಲೆಯುತ್ತಾರೆ. ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ವಿರುದ್ದ ಹರಿಹಾಯ್ದ ಸತೀಶ ಜಾರಕಿಹೊಳಿ

ನಾನು ಕ್ಷೇತ್ರಕ್ಕೆ ಬರದೇ ಹೋದರೂ ನನ್ನ ಜನ ಕಳೆದ ಬಾರಿ ಆಯ್ಕೆ ಮಾಡಿದ್ದಾರೆ. ಈ ಸಲ ದೆಹಲಿ, ಬೆಂಗಳೂರಿನಿಂದ ಯಾರೇ ಬರಲಿ ನಮ್ಮವರು ತಯಾರಿದ್ದಾರೆ. ಯಮಕನಮರಡಿ ವಿಧಾನಸಭಾ ಕ್ಷೇತ್ರದ ಚುನಾವಣೆಯ ರಣಕಹಳೆ ಊದಿದ ಸತೀಶ.

ಯುದ್ದಕ್ಕೆ ಸಿದ್ದರಾಗಿ ಎಂದು ಕಾರ್ಯಕರ್ತರಿಗೆ ಸಂದೇಶ ನೀಡಿದ ಸತೀಶ ಜಾರಕಿಹೊಳಿ ಕಳೆದ ಬಾರಿ ಕೈಯಲ್ಲಿ ಶಸ್ತ್ರ ಇಲ್ಲದೇ  ಗೆದ್ದಿದ್ದೇವೆ. ಕೈಯಲ್ಲಿ ಬಿಲ್ಲು ಬಾಣ ಇಲ್ಲದೇ ಕೈಯಿಂದ ಅಂಜಿಸಿ ಓಡಿಸಿದ್ದೇವೆ. ಈ ಸಲ ಎಲ್ಲ ತಯಾರಿಯಲ್ಲಿದ್ದೇವೆ. ಕೋರೆಗಾಂವ ವಿಜಯೋತ್ಸವದ ರೀತಿಯಲ್ಲಿ ಶಸ್ತ್ರ ಇಲ್ಲದೇ 20 ಸಾವಿರ ಪೇಶ್ವೆಗಳನ್ನ ಸೋಲಿಸಿದಂತೆ ಈ ಬಾರಿ ವಿರೋಧಿಗಳನ್ನ ಸೋಲಿಸಬೇಕು.

ಕಾರ್ಯಕರ್ತರು ಸೈನಿಕರ ಹಾಗೆ ಯುದ್ದಕ್ಕೆ ತಯಾರಗಬೇಕು. ಯಮಕನಮರಡಿ ಅಷ್ಟೇ ಅಲ್ಲ ರಾಜ್ಯಕ್ಕೆ ನ್ಯಾಯ ಕೊಡಿಸಬೇಕಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ‌ ಭಾಷಣದಲ್ಲಿ ಹೇಳಿದ್ದಾರೆ.