ಉ.ಕ ಸುದ್ದಿಜಾಲ ಕಾಗವಾಡ :
ಕಾಗವಾಡ ಶಾಸಕ, ಮಾಜಿ ಸಚಿವ ಶ್ರೀಮಂತ ಪಾಟೀಲ ಅವರು ತಮ್ಮ 67 ನೇ ಹುಟ್ಟು ಹಬ್ಬವನ್ನ ಸರಳವಾಗಿ ಆಚರಿಸಿಕೊಂಡರು. ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ ಹಮ್ಮಿಕೊಂಡ ಉಚಿತ ಮಹಾ ಆರೋಗ್ಯ ಮೇಳದ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿದರು.
ಶ್ರೀಮಂತ (ತಾತ್ಯಾ) ಪಾಟೀಲ ಅವರು ಕೋವಿಡ್ ಹಿನ್ನಲೆಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡದಿರಲು ಮೊದಲು ನಿರ್ಧರಿಸಿದ್ದರು. ಆದರೆ, ಅವರ ಅಭಿಮಾನಿ ಬಳಗದವರು ಶುಭ ಕೋರಲು ಆಗಮಿಸಿದ್ದರಿಂದ ಅತಿ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಭವ್ಯ ಆರೋಗ್ಯ ಮೇಳದ ಶಿಬಿರದಲ್ಲಿ ಸಾವಿರಾರು ಜನರು ಭಾಗವಹಿಸಿದರು. ಅದರಲ್ಲಿ ರಕ್ತದಾನ ಶಿಬಿರದಲ್ಲಿ ಸುಮಾರು 600 ಜನ ರಕ್ತದಾನ ಮಾಡಿ ಮಾನವೀಯತೆ ಮೆರೆದರು.
ಅದೇ ರೀತಿ ಕಣ್ಣಿನ ತಪಾಸಣೆಯನ್ನು ಸುಮಾರು 1,050 ಜನ ಮಾಡಿಸಿಕೊಂಡರು ಹಾಗೂ ಸುಮಾರು 500 ಜನ ಹೃದಯ ಸಂಬಧಿತ ಖಾಯಿಲೆಗೆ ಶಸ್ತ್ರಕ್ರಿಯೆ ಹಾಗೂ ತಪಾಸಣೆಯನ್ನು ಮಾಡಿಕೊಂಡರು. ಮತ್ತು ಇನ್ನಿತರ ಸಾವಿರಾರು ಜನರು ಸಾಮಾನ್ಯ ತಪಾಸಣೆಯ ಚಿಕಿತ್ಸೆಯಲ್ಲಿ ಭಾಗವಹಿಸಿದರು. ಅದೇ ರೀತಿ ಸುಮಾರು 50 ಜನರು ಕೋವಿಡ್ ವ್ಯಾಕ್ಸಿನೆಷನ್ ಮಾಡಿಸಿಕೊಂಡರು. ಹೀಗೆ ಸಾವಿರಾರು ಜನರು ಭವ್ಯ ಆರೋಗ್ಯ ಮೇಳ ಶಿಬಿರದ ಉಪಯೋಗ ಪಡೆದುಕೊಂಡರು.
ಮರಣೋತ್ತರ ಕಣ್ಣು ದಾನಿಗಳು 1. ಶ್ರೀ ಅಶೋಕ ಭೋಸಗಿ,
ರಾಜೇಂದ್ರ ಮಹಾವೀರ ಉಪಾಧ್ಯ ( ಬಾಲೋಜಿ )
2. ಶ್ರೀ ರಾಜೇಂದ್ರ ಮಹಾವೀರ ಉಪಾಧ್ಯ ( ಬಾಲೋಜಿ )
3. ಶ್ರೀಮತಿ ತಾರಕ್ಕಾ ಮಹಾವೀರ ಉಪಾಧ್ಯ (ಬಾಲೋಜಿ)
ಮರಣೋತ್ತರ ದೇಹದಾನಿಗಳು
1. ಶ್ರೀ ಅನಿಲ ಬಸಪ್ಪಾ ನೇಮಗೌಡರ (ಸಾವಳಿ),
2. ಶ್ರೀ ಬಾಳಾಸಾಬ ಬಾಬು ಕಕಮರಿ
3. ಶ್ರೀ ವಿಜಯ ಬಂಡು ನಿಕಂ
4. ಶ್ರೀಮತಿ ನಂದಾ ವಿಜಯ ನಿಕಂ
5. ಶ್ರೀ ಸಿದ್ದಪ್ಪಾ ದಶರಥ ಜಾಧವ
6. ಶ್ರೀಮತಿ ಸೀಮಾ ಸಿದ್ದಪ್ಪಾ ಜಾಧವ ಅವರು ಮರಣೋತ್ತರ ದೇಹದಾನ ಮಾಡಲು ಒಪ್ಪಿಕೊಂಡು ಮಾನವೀಯತೆ ಮೆರೆದರು. ಸ್ವಇಚ್ಚೆಯಿಂದ ಮರಣೋತ್ತರ ದೇಹದಾನ ಮಾಡಲು ಒಪ್ಪಿಗೆ ಸೂಚಿಸಿರುವ ದಾನಿಗಳನ್ನು ಶಾಸಕರು ಸತ್ಕರಿಸಿ, ಅವರ ಸಮಾಜ ಸೇವೆಗೆ ಅಭಿನಂದನೆ ಕೋರಿದರು.
ಇದೇ ಸಮಯದಲ್ಲಿ 4 ಜನ ಅಂಗವಿಕಲರಿಗೆ ತ್ರಿಚಕ್ರ ವಾಹನ, ಹಾಗೂ ಗಂಗಾಕಲ್ಯಾಣ ಯೋಜನೆಯಡಿಯಲ್ಲಿ ಮಂಜೂರಾದ ಫಲನುಭವಿಗಳಿಗೆ ಬೋರ್ವೆಲ್ ಪಂಪಸಟ್ ಗಳ್ಳನ್ನು ಶಾಸಕರು ವಿತರಿಸಿದರು.
ಈ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು ನನಗೆ ಈ ಬಾರಿ ಸಚಿವ ಸ್ಥಾನ ಸಿಕ್ಕೆ ಸಿಗುತ್ತೆ ನನಗೆ ಹೈ ಕಮಾಂಡ ಸ್ಪಷ್ಟವಾಗಿ ಹೇಳಿದೆ, ಈ ಬಾರಿ ನನ್ನ ಹೆಸರು ಲಿಸ್ಟನಲ್ಲಿ ಇದೆ. ನಿವೇನು ಕಾಳಜಿ ಮಾಡಬೇಡಿ ನಿಮ್ಮ ಹೆಸರು ಪೈನಲ್ ಇದೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳುತ್ತಿದ್ದು.
ಒಂದು ವೇಳೆ ಸಚಿವ ಸ್ಥಾನ ನೀಡದೆ ಹೋದರೂ ಕೂಡಾ ನಾವು ಜನರ ಸೇವೆ ಮಾಡತ್ತೀವಿ, ಕಳೆದ ಬಾರಿ ಸಚಿವ ಸಂಪುಟದಲ್ಲಿ ನನಗೆ ಮಂತ್ರಿಸ್ಥಾನ ಮಿಸ್ ಆಗಿದೆ. ಆದರೆ, ಈ ಬಾರಿ 100% ಹೊಸ ಸಚಿವ ಸಂಪುಟದಲ್ಲಿ ಹೆಸರಿದೆ ಎಂದು ಹೇಳಿದ್ದಾರೆ. ಇನ್ನೂ ಕೆಲ ದಿನಗಳಲ್ಲಿಯೇ ಸಚಿವ ಸಂಪುಟ ವಿಸ್ತರಣೆ ಮಾಡವವರಿದ್ದಾರೆ. ನನ್ನ ಹೆಸರ ಮಾತ್ರ ಸಚಿವ ಸಂಪುಟದಲ್ಲಿ ಇರಲಿದೆ. ಮಹೇಶ ಕುಮಟಳ್ಳಿಗೂ ಸಚಿವ ಸ್ಥಾನ ನೀಡಬೇಕು, ಅವರು ಕೂಡಾ ಪಕ್ಷ ಬಿಟ್ಟ ಬಂದವರೂ ಅವರಿಗೂ ಕೂಡಾ ಕೊಡಬೇಕು. ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರೊ ವಿಚಾರ ನನಗೆ ಗೊತ್ತಿಲ್ಲ. ಡಿ.ಕೆ ಶಿವಕುಮಾರ ಹಾಗೂ ಸಿದ್ದರಾಮಯ್ಯ ಅವರಿಗೆ ನಾನೇನು ಬೇಟಿ ಆಗಿಲ್ಲ. ಅವರೂ ಕೂಡಾ ನನ್ನ ಬೇಟಿಯಾಗಿಲ್ಲ. ಕಳೆದ ಎರಡ್ಮುರು ತಿಂಗಳಿದ ಯಾರು ಬೇಟಿಯಾಗಿಲ್ಲ ಎಂದು ಹೇಳಿದರು.
17 ವಲಸಿಗ ಶಾಸಕರು ಮತ್ತೆ ಕಾಂಗ್ರೆಸ್‌ಗೆ ಹೋಗುವ ವಿಚಾರ, ಈಗಾಗಲೇ ಸರ್ಕಾರ ನಮ್ಮ ಕ್ಷೇತ್ರಕ್ಕೆ ಬೇಕಾಗುವ ಕೆಲಸಗಳನ್ನ ನೀಡಿದ್ದಾರೆ. ಆರ್‌ಎಸ್‌ಎಸ್ ಮುಖಂಡರನ್ನ ಬೇಟಿಯಾಗಿಲ್ಲ, ಪ್ರತಿದಿನ ನನಗೆ ಸಚಿವ ಸ್ಥಾನ ನೀಡು ಎಂದು ಕೇಳುವ ಮನುಷ್ಯ ನಾನಲ್ಲ, ನನಗೆ ಸಚಿವ ಸ್ಥಾನಕೊಡತ್ತಿನಿ ಎಂದಿದ್ದಾರೆ ಹೀಗಾಗಿ ನಾನು ಎಲ್ಲಿ ಕೂಡಾ ಸಚಿವ ಸ್ಥಾನದ ಬಗ್ಗೆ ಚರ್ಚೆ ಮಾಡಿಲ್ಲ. ಮುಂದಿನ 2023 ವಿಧಾನಸಭೆ ಚುನಾವಣೆಯನ್ನು ಬಿಜೆಪಿ ಪಕ್ಷದಿಂದ ಕಾಗವಾಡ ಮತಕ್ಷ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದರು.
ಈ ಸಮಯದಲ್ಲಿ ಸ್ಥಳೀಯ ಮುಖಂಡರು, ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು, ಕಾರ್ಯನಿರ್ವಾಹಕ ನಿರ್ದೇಶಕರು, ಭವ್ಯ ಆರೋಗ್ಯ ಮೇಳದ ವ್ಯಧ್ಯಾಧಿಕಾರಿಗಳು, ಕಾರ್ಖಾನೆಯ ಹಲವು ವಿಭಾಗದ ಅಧಿಕಾರಿಗಳು, ಕಾರ್ಮಿಕ ಬಂದುಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.