ಉ.ಕ ಸುದ್ದಿಜಾಲ ಹಾವೇರಿ :
ಬಸವರಾಜ ಬೊಮ್ಮಾಯಿ ಮಹಾವೀರ ಭಗವಾನರ ಭಕ್ತರು. ಅದಕ್ಕಾಗಿ ಅವರು ಇಂದು ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ಈ ಹಿಂದೆ ಕೆಜೆಪಿ ಬಿಜೆಪಿ ಆದಾಗ ಏನು ಮಾಡ್ಲಿ ಅಂತಾ ನನ್ನ ಬಳಿ ಬಂದು ಕೇಳಿದ್ರು ಈಗ ಇದಿಯಾ ಹಂಗೆ ಇದ್ದಬಿಡು ಬೆರೆ ಕಡೆ ಹೋಗಬೇಡ ಅಂದಿದ್ದೆ ಎಂದು ಮುನಿಶ್ರೀ 108 ಪುಣ್ಯ ಸಾಗರ ಮಹಾರಾಜರು ಹೇಳಿದರು.
ಹಾವೇರಿಯಲ್ಲಿ ಮಾತನಾಡಿದ ಮಹರಾಜರು ಅವರು ಬಿಜೆಪಿಯಲ್ಲೆ ಮುಂದುವರೆದಿದ್ದಕ್ಕೆ ಇಂದು ರಾಜ್ಯದ ಸಿಎಂ ಆದ್ರು. ನಮ್ಮ ಸಮಾಜಕ್ಕೆ ಯಾತ್ರಿ ನಿವಾಸಕ್ಕಾಗಿ ನಾವು ಯಾವತ್ತೂ ಮನವಿ ಮಾಡಿರಲಿಲ್ಲ. ಆದ್ರೆ ನಮ್ಮ ಸಮಾಜದ ಮೇಲಿನ ಅಭಿಮಾನದಿಂದ ಯಾತ್ರಿ ನಿವಾಸ ಮಂಜೂರು ಮಾಡಿದ್ರು.
ಜೈನ ಧರ್ಮವನ್ನು ಆಚರಣೆ ಮಾಡುವ ಪ್ರತಿಯೊಬ್ಬರು ಜೈನ ಧರ್ಮಿಯರು. ಜೈನ ಧರ್ಮದಲ್ಲಿ ಹುಟ್ಟಿದವರು ಮಾತ್ರ ಜೈನ ಧರ್ಮದವರಲ್ಲ ಎಂದು ಹೇಳಿದರು.