ಉ.ಕ ಸುದ್ದಿಜಾಲ ಅಥಣಿ :

ಅಥಣಿ ಮತಕ್ಷೇತ್ರದ ಮುಂಬರುವ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರು ಅನ್ನುವ ಗೊಂದಲ ಬಹಳಷ್ಟು ಜನರಲ್ಲಿ ಇದೆ. ಸದ್ಯಕ್ಕೆ ನಮ್ಮ ತಂದೆಯವರ ಅಭಿಮಾನಿಗಳು ಮತ್ತು ಹಲವಾರು ಬಿಜೆಪಿ ಕಾರ್ಯಕರ್ತರು ಲಕ್ಷ್ಮಣ ಸವದಿ ಅವರೆ ಸ್ಪರ್ಧಿಸಬೇಕು ಅನ್ನುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸುಪುತ್ರ ಚಿದಾನಂದ ಸವದಿ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮಾತನಾಡಿದ ಅವರು, ನಮ್ಮ ತಂದೆಯವರು ಕಳೆದ ಹದಿನೈದು ಇಪ್ಪತ್ತು ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದಾರೆ. 2018 ಚುನಾವಣೆಯಲ್ಲಿ ಟಿಕೆಟ್ ಬಿಟ್ಟುಕೊಟ್ಟು ಮಹೇಶ ಕುಮಠಳ್ಳಿ ಅವರಿಗೆ ಅವಕಾಶ ಕೊಟ್ಟಿದ್ದಾರೆ.

ಆದರೆ ಜನರ ಅಭಿಪ್ರಾಯ ನೋಡಿ ನಾವು ಈ ಬಾರಿ ಕ್ಷೇತ್ರವನ್ನು ಬಿಟ್ಟು ಕೊಡಬಾರದು ಅಂತ ನಿರ್ಧಾರ ಮಾಡಿದ್ದೇವೆ. ನಾವು ಯಾರೂ ಗೋಕಾಕ ಕ್ಷೇತ್ರದ ಬಗ್ಗೆ ಮಾತನಾಡಿಲ್ಲ. ಗೋಕಾಕ ಸಾಹುಕಾರರು ಮಹೇಶ್ ಕುಮಠಳ್ಳಿ ಅವರ ಮೇಲಿನ ವೈಯುಕ್ತಿಕ ಪ್ರೀತಿ ಮತ್ತು ಅಭಿಮಾನದಿಂದ ಮಾತನಾಡಿದ್ದಾರೆ.

ಅಷ್ಟು ಪ್ರೀತಿ ಅವರ ಮೇಲೆ ಇದ್ದರೆ ತಮ್ಮ ಮತಕ್ಷೇತ್ರವನ್ನು ಬೇಕಿದ್ದರೆ ಅವರು ಬಿಟ್ಟುಕೊಡಲಿ. ಟಿಕೆಟ್ ಹಂಚಿಕೆ ವಿಚಾರಬಾಗಿ ನಾವು ಪಕ್ಷದ ವರಿಷ್ಠರು ಮತ್ತು ಹೈಕಮಾಂಡ್ ನಿರ್ಧಾರಕ್ಕೆ  ಬದ್ದವಾಗಿದ್ದೇವೆ. ಈ ವಿಚಾರ ನಮಗೂ ಅಥಣಿಯ ಶಾಸಕರಿಗೂ ಗೋಕಾಕದ ಸಾಹುಕಾರರಿಗೂ ಅನ್ವಯಿಸುತ್ತದೆ ಎಂದ ಚಿದಾನಂದ ಸವದಿ..

ಅಥಣಿ ಪಟ್ಟಣದಲ್ಲಿ ಹೇಳಿಕೆ ವಿಚಾರ ವರದಿಯಾಗುತ್ತಿದ್ದಂತೆ ಮತ್ತೆ ಪತ್ರಿಕಾ ಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಲಕ್ಷ್ಮಣ ಸವದಿ ಸುಪುತ್ರ ಚಿದಾನಂದ ಸವದಿ…