ಉ.ಕ‌ ಸುದ್ದಿಜಾಲ ಕಾಗವಾಡ :

ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲಾ ಪಕ್ಷದ ಅಭ್ಯರ್ಥಿಗಳು ಟೀಕೆಟ್ ಪಡೆಯುವುದಕ್ಕಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕರ ಹತ್ತಿರ ಹೋಗಿ ಟೀಕೆಟ್ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುವದನ್ನ ನಾವೆಲ್ಲಾ ರಾಜಕೀಯ ವಲಯದಲ್ಲಿ ನೋಡಿದ್ದೆವೆ.

ಆದರೆ, ಇಲ್ಲೋಬ್ಬ ಯುವಕ ತನ್ನ ನೆಚ್ಚಿನ ನಾಯಕನಿಗೆ ಬಿಜೆಪಿ ಪಕ್ಷದ ವತಿಯಿಂದ ಟೀಕೆಟ ಸಿಗಲಿ ಎಂದು ದೇವರ ಮೊರೆ ಹೋಗಿದ್ದು ದೀರ್ಘ ದಂಡ ನಮಸ್ಕಾರ ಹಾಕುತ್ತಿದ್ದಾನೆ ಹಾಗಾದ್ರೆ ಇದೇನ ಸ್ಟೋರಿ ಅಂತೀರಾ ನೀವೆ ನೋಡಿ.

ಬೆಳಗಾವಿ ಜಿಲ್ಲೆಯ ಕಾಗವಾಡ ವಿಧಾನಸಭಾ ಮತಕ್ಷೇತ್ರದ ಬೇಡರಹಟ್ಟಿ ಗ್ರಾಮದ ನಿವಾಸಿಯಾದ ಸುರೇಶ ಪರಪ್ಪ ಸತ್ತಿ ಎಂಬ ಯವಕ ತನ್ನ ನೆಚ್ಚಿನ ನಾಯಕರಾದ ಅಮೋಲ ಸರಡೆ ಅವರಿಗೆ ಕಾಗವಾಡ ಮತಕ್ಷೇತ್ರದ ಬಿಜೆಪಿ ಪಕ್ಷದಿಂದ ಟೀಕೆಟ್ ಸಿಗಲಿ ಎಂದು ಬೇಡರಹಟ್ಟಿ ಗ್ರಾಮದಿಂದ ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರಿನ ವೀರಭದ್ರೇಶ್ವರ ದೇವರಿಗೆ ಹರಕೆ ಹೊತ್ತು ದೀರ್ಘ ದಂಡ ನಮಸ್ಕಾರ ಹಾಕಿದ್ದಾನೆ

ಹಾಗಾದ್ರೆ ಈ ಅಮೂಲ್ ಸರಡೆ ಯಾರು ಎಂದು ನೋಡುವುದಾದರೆ ಈತ ಮೂಲತಃ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದವರು ವೃತ್ತಿಯಲ್ಲಿ ದಂತ ವೈದ್ಯ ತಾನು ಸಂಪಾದಿಸಿದ ಹಣದಲ್ಲಿ ಬಡವರಿಗೆ ಸಹಾಯ ಮಾಡುತ್ತಾ ಚಿಕ್ಕೋಡಿ ಜಿಲ್ಲಾ ವಿಶ್ವ ಹಿಂದೂ ಪರಿಷತ್ ದಳದ ಉಪಾಧ್ಯಕ್ಷರಾಗಿ ಮತಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ರಾಜಕೀಯಕ್ಕೆ ಬರುವುದಕ್ಕೆ ಇಷ್ಟ ಇಲ್ಲದಿದ್ದರೂ ಸಹ ಕಾರ್ಯಕರ್ತರ ಒತ್ತಾಯ ಹಾಗೂ ಜನರ ಒತ್ತಾಯಕ್ಕೆ ಕಾಗವಾಡ ಮತಕ್ಷೇತ್ರದ ಬಿಜೆಪಿ ಪಕ್ಷದ ಪ್ರಬಲ ಆಕಾಂಕ್ಷಿಯಾಗಿ ರಾಜಕೀಯ ಜೀವನವನ್ನು ಪ್ರಾರಂಭಿಸಲು ಸಜ್ಜಾಗಿದ್ದಾರೆ.

ಈ ವೇಳೆ ಮಾತನಾಡಿದ ಯುವಕ ಸುರೇಶ ಸತ್ತಿ ಅಮೂಲ ಸರಡೆ ಅವರು ಅಧಿಕಾರದಲ್ಲಿ ಇಲ್ಲದೆ ಇದ್ದರು ಸಹ ಸಾಕಷ್ಟು ಸಮಾಜಮುಖಿ ಕೆಲಸಗಳನ್ನ ಮಾಡಿದ್ದಾರೆ ಕಳೆದ ೧೦ ವರ್ಷಗಳಿಂದ ನಾನು ಇವರ ಅಭಿಮಾನಿಯಾಗಿದ್ದೇನೆ ಇವರಿಗೆ ಬಿಜೆಪಿ ಪಕ್ಷದಿಂದ ಟಿಕೆಟ್ ಸಿಗಲಿ ಹಾಗೂ ಜಯಶಾಲಿ ಆಗಲಿ ಎಂದು ನಾನು ಈ ಧೀರ್ಘ ದಂಡ ನಮಸ್ಕಾರ ಹಾಕುತ್ತಿದ್ದೇನೆ ಎಂದು ಹೇಳಿದರು.

ಒಟ್ಟಿನಲ್ಲಿ ನೋಡುವುದಾದರೆ ಭಕ್ತನ ಭಕ್ತಿಗೆ ಮೆಚ್ಚಿ ವೀರಭದ್ರೇಶ್ವರನ ಆಶಿರ್ವಾದ ಪ್ರಬಲ ಆಕಾಂಕ್ಷಿಯಾದ ಅಮೂಲ ಸರಡೆ ಅವರಿಗೆ ಟಿಕೆಟ್ ಸಿಗುವಂತೆ ಆಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.