ಉ.ಕ ಸುದ್ದಿಜಾಲ ಬೆಳಗಾವಿ ‌:

ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಆಟೋ ಚಾಲಕನ ಬರ್ಬರ ಹತ್ಯೆ ಮಾಡಿರುವ ಘಟನೆ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ‌.

ಕಳೆದ ಐದುದಿನಗಳಿಂದ ಮನೆ ಬಿಟ್ಟು ಹೋಗಿದ್ದ ಆಟೋ ಚಾಲಕ ನೂಹಾನ್ ಧಾರವಾಡಕರ್ (23) ಕೊಲೆಯಾದ ದುರ್ದೈವಿ, ಬೆಳಗಾವಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕದ ನಿರ್ಜನ ಪ್ರದೇಶದಲ್ಲಿ ಈ ಘಟನೆ‌ ನಡೆದಿದ್ದು, ನಿರ್ಜನ ಪ್ರದೇಶದ ಹಾಳು ಮನೆಯಲ್ಲಿ ತಲೆಯ ಮೇಲೆ‌ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ. ಮಾಳಮಾರುತಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟ‌ನೆ ನಡೆದಿದೆ.

ಇದನ್ನೂ ಓದಿ : ಬೈಕ್ ಕಳ್ಳರ ಬಂಧನ : 12.50 ಲಕ್ಷ ಮೌಲ್ಯದ 15 ಬೈಕ್ ವಶ https://uksuddi.com/ballari-byk-kallara-bandana/#.YdutITmk4yo.whatsapp