ಉ.ಕ ಸುದ್ದಿಜಾಲ ಚಾಮರಾಜನಗರ :
ಬಿಸಿಯೂಟ ಸೇವಿಸಿ 60 ಕ್ಕು ಹೆಚ್ಚು ಶಾಲಾ ವಿದ್ಯಾರ್ಥಿಗಳು ಅಸ್ವಸ್ಥ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ವಡಕೆಹಳ್ಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ.
ಮಧ್ಯಾಹ್ನ ಶಾಲೆಯ ಬಿಸಿಯೂಟ ಸವಿಯುತ್ತಿದ್ದ ಮಕ್ಕಳು. ಈ ವೇಳೆ ಊಟ ಬಡಿಸುವಾಗ ಸಾಂಬಾರ್ ನಲ್ಲಿ ಕಂಡ ಹಲ್ಲಿ. ಹಲ್ಲಿ ಕಂಡ ತಕ್ಷಣವೇ ಊಟ ಮಾಡದಂತೆ ಮಕ್ಕಳಿಗೆ ಶಿಕ್ಷಕರ ಸೂಚನೆ. ಈ ವೇಳೆ ಊಟ ಮಾಡಿದ್ದ ಕೆಲ ಮಕ್ಕಳಲ್ಲಿ ವಾಂತಿ ಕಾಣಿಸಿಕೊಂಡಿದೆ.

ಬಳಿಕ ಗಾಬರಿಗೊಂಡ 60 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದು, ತಕ್ಷಣವೇ ಅಸ್ವಸ್ಥಗೊಂಡ ಹಾಗೂ ಊಟ ಸೇವಿಸಿದ್ದ ಎಲ್ಲ ಮಕ್ಕಳನ್ನ ಸ್ಥಳೀಯ ಆಸ್ಪತ್ರೆ ದಾಖಲಿಸಲಾಗಿದ್ದು, ಸದ್ಯ ಎಲ್ಲ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.