ಉ.ಕ ಸುದ್ದಿಜಾಲ ಬೆಳಗಾವಿ :

ಮಕ್ಕಳಲ್ಲಿ ಕೊರೊನಾ ಸೋಂಕು ಉಲ್ಬಣ ಹಿನ್ನೆಲೆ ಬೆಳಗಾವಿ ಜಿಲ್ಲಾಡಳಿತದಿಂದ ಕ್ರಮ ಜಿಲ್ಲೆಯಲ್ಲಿ ನಾಳೆಯಿಂದ 1 ರಿಂದ 9ನೇ ತರಗತಿಯ ಶಾಲೆ ಬಂದ್ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ.

ಕೋವಿಡ್ ವ್ಯಾಪಿಸುತ್ತಿರುವ ಹಿನ್ನೆಲೆ ಇಂದು ಡಿಹೆಚ್‌ಒ, ಡಿಡಿಪಿಐ ಜೊತೆ ಸಭೆ ನಢಸಲಾಗಿದ್ದು, ಏಳು ದಿನದ ಮಟ್ಟಿಗೆ 1 ರಿಂದ‌ 9 ತರಗತಿಗಳ ಶಾಲೆಗಳ ಬಂದ್‌ಗೆ ಸಲಹೆ ನೀಡಲಾಗಿದೆ. ವಸತಿ ಶಾಲೆಗಳು ಒಳಗೊಂಡಂತೆ 1 ರಿಂದ 9ನೇ ತರಗತಿಯ ವರೆಗೆ ಶಾಲೆಗಳು ಬಂದ್.

ಪೋಷಕರು ಹೆದರುವ ಅವಶ್ಯಕತೆ ಇಲ್ಲ. ಮಕ್ಕಳಿಗೆ ರೋಗದ ಗುಣಲಕ್ಷಣ ಇದ್ರೆ ಕೋವಿಡ್ ತಪಾಸಣೆ ಮಾಡಿಸಲು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮನವಿ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಈವರೆಗೆ 143 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ತಗುಲಿದೆ.