ಉ..ಕ ಸುದ್ದಿಜಾಲ ಅಥಣಿ :

ಡೆಕ್ಕನ್ ಹಾಲಿಡೆಸ್ ಟ್ರಾವೆಲ್ ಎಜನ್ಸಿಯಿಂದ ಜಮ್ಮು ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದ್ದ 18 ಜನ ಸೇಫ್ ಆಗಿ ತಾಯ್ನಾಡಿಗೆ ಮರಳುತ್ತಿದ್ದಾರೆ.

ಕಾಶ್ಮೀರ ಪ್ರವಾಸಕ್ಕೆ ಹೋದ ಅಥಣಿ-ವಿಜಯಪುರ ಮೂಲದ 18 ಜನ ಸೇಫ್

ಬೆಳಗಾವಿ ಜಿಲ್ಲೆ ಅಥಣಿ  ಹಾಗೂ ವಿಜಯಪುರದಿಂದ ಕಳೆದ 4 ದಿನಗಳ ಹಿಂದೆ ಜಮ್ಮು ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದ 18 ಜನರು  ಸೇಫ್ ಆಗಿ ಮರಳಿದ್ದಾರೆ ಎಂದು  ತಿಳಿದು ಬಂದಿದೆ.

ಜಮ್ಮು-ಕಾಶ್ಮೀರದ ಶ್ರೀನಗರದ ಫೇಹಲ್ ಗಾಂ ದಾರಿ ಮದ್ಯ ಅತಿಯಾದ ಮಳೆಯಿಂದ ರಾಮ್ ಬಾನ್  ನ್ಯಾಷನಲ್ ಹೈವೇ ಗುಡ್ಡ ಕುಸಿತವಾಗಿ  ರಸ್ತೆ ಸಂಚಾರ ಬಂದ್ ಆಗಿತ್ತು ಈ ಹಿನ್ನೆಲೆಯಲ್ಲಿ ಫೇಹಲ್ ಗಾಂ ಗೆ ಹೋಗಬೇಕಿದ್ದ, 18 ಜನ ಪ್ರವಾಸಿಗಳಿಗೆ ವಿಳಂಭವಾಗಿತ್ತು.

ಅಷ್ಟರಲ್ಲೇ ಫೇಹಲ್ ಗಾಂ ನಲ್ಲಿ ಉಗ್ರರ ದಾಳಿಯಾಗಿದ್ದು 30 ಕ್ಕೂ ಹೆಚ್ಚು ಹಿಂದೂ ಪ್ರವಾಸಿಗರು ಹತ್ಯಯಾಗಿದೆ ಅದೃಷ್ಟ ವಶಾ ತ್ ಮಳೆ ಬಂದ ಕಾರಣ ಇವರು ಅಮೃತ ಸರ ನಲ್ಲೆ ನಿಂತ್ತಿದ್ದು ಎಲ್ಲರೂ ಸುರಕ್ಷಿತವಾಗಿದ್ದರೆ.

ಐದು ಜನ ಪುರಷರು, ಎಂಟು ಮಹಿಳೆಯರು, ಐದು ಮಕ್ಕಳು ಹೀಗೆ 18 ಜನ ಪ್ರವಾಸಲ್ಲಿದ್ದು, ಉಗ್ರರ ಅಟ್ಟಹಾಸಕ್ಕೆ ಪ್ರವಾಸಿಗರು ಕಂಬನಿ ಮಿಡಿದಿದ್ದಾರೆ.ಉಗ್ರರ ಅಟ್ಟಹಾಸದಿಂದ ಕಾಶ್ಮೀರದಲ್ಲಿ ಬೀಗಿ ಬಂದೋಬಸ್ತ್ ಅಳವಡಿಸಿದ್ದು ಸದ್ಯ 18 ಜನ ಪ್ರವಾಸಿಗರು ಸುರಕ್ಷಿತವಾಗಿ ಮರಳುತ್ತಿದ್ದಾರೆ.