ಉ.ಕ ಸುದ್ದಿಜಾಲ ಧಾರವಾಡ :
ಸಿದ್ದು ಮಾತು ಲೆಕ್ಕಕ್ಕೆ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಜಗ್ಗೇಶ್ ನಟ, ರಾಜ್ಯ ಸಭಾ ಸದಸ್ಯ ಜಗ್ಗೇಶ್ ಟಾಂಗ್ ನೀಡಿದ್ದಾರೆ.
ಧಾರವಾಡದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ನನ್ನ ಪ್ರಕಾರ ಅಥೈಯಿಸುವಂತದ್ದು, ವಾದ ಮಾಡುವಂತದ್ದು ತಿಳಿದುಕೊಳ್ಳುವಂತದ್ದು, ಏನು ನಡೆದಿದೆ ಅಂತ ಹೇಳುವಂತದ್ದು ಯಾರು ಇರ್ತಾರೆ ಅಂಥವರ ಬಾಯಲ್ಲಿ ಅಪಬ್ರಾಂಷ ಮಾತು ಬರೋದಿಲ್ಲ.
ಯಾರಿಗೆ ದ್ವೇಷ ಇರುತ್ತೆ, ನನಗೆ ಮಾಡೋಕೆ ಆಗಲ್ಲ ಅನ್ನೋ ಅಸಾಹಾಯಕತೆ ಇರುತ್ತೆ ಅಂತವರು ಕೆಟ್ಟ ಮಾತುಗಳ ಮೂಲಕ ಕೋಪವನ್ನ ತೋರ್ಪಡಿಸುತ್ತಾರೆ ಅದು ಪ್ರಯೋಜನಕ್ಕೆ ಬರೋದಿಲ್ಲ.
ಸಿಎಂ ಆಗಲಿ, ಅಥವಾ ಪ್ರಧಾನಿ ಮೋದಿ ಆಗಲಿ ರಾಷ್ಟಮಟ್ಟ ಹಾಗೂ ರಾಜ್ಯ ಮಟ್ಟದಲ್ಲಿ ಎಲ್ಲ ಕೆಲಸ ಜನಸಾಮಾನ್ಯರಿಗೆ ಅದ್ಭುತವಾಗಿ ತಿಳಿದಿದೆ ಹಾಗಾಗಿ ಇದನ್ನ ಯಾರು ಲೆಕ್ಕಕ್ಕೆ ತೆಗೆದುಕೊಂಡಿಲ್ಲ.