ಉ.ಕ ಸುದ್ದಿಜಾಲ ಹುಕ್ಕೇರಿ :

ಇನ್ನೂ ಕೃಷ್ಣಾ ನದಿಯಲ್ಲಿ ಹತ್ತು ದಿನಗಳ ವರೆಗೆ ನೀರು ಇದೆ. ಮುಂದೆ ಹಿಡಕಲ ಡ್ಯಾಂ ನಿಂದ ನೀರ ಬಿಡುತ್ತೇವೆ ಅಷ್ಟರಲ್ಲಿ ಮಹಾರಾಷ್ಟ್ರದಿಂದ ನೀರ ಬಿಟ್ಟರೆ ಅನಕೂಲವಾಗುತ್ತೆ ಎಂದು ಬೆಳಗಾವಿ ಉಸ್ತುವಾರಿ ಸಚಿವ ಸತೀಶ ಜಾರಕಿಹೋಳಿ ಹೇಳಿದರು.

ಬೆಳಗಾವಿ ಉಸ್ತುವಾರಿ ಸಚಿವ ಸತೀಶ ಜಾರಕಿಹೋಳಿ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆನೀಡಿದ ಅವರು ಮಹಾರಾಷ್ಟ್ರದವರು ನೀರು ಬಿಡುಗಡೆ ಮಾಡದಿದ್ದರೆ ಹಿಡಕಲ್ ಡ್ಯಾಂನಿಂದ ನೀರು ಬಿಡುಗಡೆ ಮಾಡತ್ತಿವಿ. ಕೃಷ್ಣಾ ನದಿ ನೀರಿನ ಬಗ್ಗೆ ಬೆಳಗಾವಿ ಡಿಸಿ ಹತ್ತಿರ ಮಾತಾಡಿದ್ದೆನೆ, ಇನ್ನೂ ಕೃಷ್ಣಾ ನದಿಯಲ್ಕಿ ಹತ್ತು ದಿನಗಳ ವರೆಗೆ ನೀರು ಇದೆ ಅಂದಿದ್ದಾರೆ

ಅಂಜಲಿ ಕೊಲೆ ಬಳಿಕ ಬಿಜೆಪಿ‌ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಬಿಜೆಪಿಯವರು ಅಷ್ಟೆ ಎಲ್ಲದಕ್ಕೂ ರಾಜಕೀಯ ಉಪಯೋಗ ಮಾಡತ್ತಾರೆ ಅಂತಾ ಹೇಳಿದ್ದೇವೆ. ಚುನಾವಣೆ ನಡೆದರೆ ಅಷ್ಟೆ ಬಿಜೆಪಿಯವರು ಹೋರಾಟ ಮಾಡತ್ತಾರೆ.

ಬೇರೆಯವರಿಗೆ ನ್ಯಾಯ ಕೊಡಸಲಿಕ್ಕೆ ಬಿಜೆಪಿಯವರ ಹೋರಾಟ ಇಲ್ಲ, ಜನರು ಬಿಜೆಪಿ ಬಗ್ಗೆ ತಿಳಕೊ ಬೇಕು ಅಷ್ಟೆ. ಅಂಜಲಿ ಕೊಲೆಗೆ ಸರ್ಕಾರಕ್ಕೆ ಯಾವುದೇ ಸಂಬಂಧವಿಲ್ಲ ಎಂದರು.

ನಿನ್ನೆ ಸರೀಶ ಜಾರಕಿಹೋಳಿ ಮನೆಯಲ್ಲಿ ದಲಿತ ನಾಯಕರ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಈ ಬಗ್ಗೆ ನಿನ್ನೆ ಬೆಂಗಳೂರಲ್ಲಿ ಪ್ರತಿಕ್ರಿಯೆ ನೀಡಿದ್ದೆನೆ ಎಂದರು.

ಪ್ರಜ್ವಲ್ ರೇವಣ್ಣ ತನಿಖೆ ವಿಚಾರ, ಪ್ರಜ್ವಲ್ ರೇವಣ್ಣ ಬಗ್ಗೆ ಗೃಹ ಮಂತ್ರಿ ಸ್ಪಷ್ಟಿಕರಣ ನೀಡಬೇಕು ಪ್ರಜ್ವಲ್ ರೇವಣ ಕೇಸ ಅದು ಖಾಸಗಿ ವಿಷಯ ಎಂದರು.

ಬೆಳೆ ಹಾನಿ ಈಗಾಗಲೇ 2 ಲಕ್ಷ ಕ್ಕೂ ಅಧಿಕ ರೈತರಿಗೆ ನೀಡಿದ್ದೇವೆ ಇನ್ನೂ ಒಂದ ಲಕ್ಷ ಉಳದಿದೆ, ಇನ್ನೂ ಕೇಂದ್ರದಿಂದ ಹಣ ಬರಬೇಕಿದೆ ಕೆಂದ್ರದಿಂದ ಹಣ ಬಂದ ಮೇಲೆ ರೈತರಿಗೆ ಪರಿಹಾರ ನೀಡತ್ತೇವೆ ಮೇವಿನ ಅವಶ್ಯಕತೆ ಇಲ್ಲ ಈಗಾಗಲೇ ಮಳೆಯಾಗಿತ್ತಿದೆ ಎಂದರು.

ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆ ವಿಚಾರವಾಗಿ ಪ್ರತಿಕಗರಿಯಿಸೊದ ಅವರು ಈಗಾಗಲೇ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಮಹಾರಾಷ್ಟ್ರದಿಂದ ನೀರು ಬಿಡತ್ತಾರೆ ಅನ್ನುವ ಆಸೆ ಇದೆ ಎಂದು ಹುಕ್ಕೇರಿ ಪಟ್ಟಣದಲ್ಲಿ ಸತೀಶ ಜಾರಕಿಹೋಳಿ ಪ್ರತಿಕ್ರಿಯೆ ನೀಡಿದ್ದಾರೆ.