ಉ.ಕ ಸುದ್ದಿಜಾಲ ಬೆಳಗಾವಿ :
ಪಾರ್ಟಿ ಮಾಡಿದ ಬಿಲ್ ಕೊಡಲಿಲ್ಲ ಎಂಬ ಕಾರಣಕ್ಕೆ ಯುವಕನ ಹೊತ್ತೊಯ್ದು ಬರ್ಬರ ಹತ್ಯೆ. ಬೆಳಗಾವಿಯ ಪ್ರತಿಷ್ಠಿತ ವೈದ್ಯ ಡಾ. ಮಹಾಂತೇಶ ಕಲ್ಲೋಳಿ ಕಾರು ಚಾಲಕನ ಕೊಲೆ ಹಂತಕರು ಅಂದರ್. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ಕಾಂಪೌಂಡ್ ಬಳಿ ನಡೆದಿದ್ದ ಕೊಲೆ ಪ್ರಕರಣ.
ಕಳೆದ 11 ದಿನಗಳ ಹಿಂದೆ ನಡೆದ ಕೊಲೆ ಪ್ರಕರಣ ಬೇಧಿಸಿದ ಮಾರಿಹಾಳ ಠಾಣೆ ಪೊಲೀಸರು ಮೊಬೈಲ್ ಲೋಕೇಶನ್ ಆಧರಿಸಿ ರೋಚಕವಾಗಿ ಹಂತಕರ ಸುಳಿವು ಪತ್ತೆ ಹಚ್ಚಿದ ಪೊಲೀಸರು. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಆಲದಕಟ್ಟಿ ಗ್ರಾಮದ ನಿಂಗನಗೌಡ ಸಣ್ಣಗೌಡರ (26) ಕೊಲೆಯಾಗಿದ್ದ ದುರ್ದೈವಿ.
ಕಂಠಪೂರ್ತಿ ಕುಡಿದು ಯರಗಟ್ಟಿ ಪಟ್ಟಣದಿಂದ ಬೆಳಗಾವಿ ಕಡೆಗೆ ಬಸ್‌ನಲ್ಲಿ ಬರ್ತಿದ್ದ ನಿಂಗನಗೌಡ ಮಾರ್ಗಮಧ್ಯೆ ಬರುವ ಮೋದಗಾ ಗ್ರಾಮದ ಬಳಿ ಬಸ್‌ನಿಂದ ಕೆಳಗೆ ಇಳಿದಿದ್ದ ನಿಂಗನಗೌಡ ಸಣ್ಣಗೌಡ ಈ ವೇಳೆ ಬೈಕ್ ಮೇಲೆ ಬರುತ್ತಿದ್ದ ಇಬ್ಬರನ್ನು ತಡೆದಿರುವ ನಿಂಗನಗೌಡ.
ನನಗೆ ಬೆಳಗಾವಿವರೆಗೆ ಲಿಫ್ಟ್ ಕೊಟ್ಟರೆ ಪಾರ್ಟಿ ಮಾಡಿಸಿ, ಒಂದು ಸಾವಿರ ಹಣ ನೀಡುವ ಆಮೀಷ ತೊರಿಸಿದ್ದ ಆಯ್ತು ಎಂದು ನಿಂಗನಗೌಡನನ್ನು ಬೈಕ್ ಮೇಲೆ ಹತ್ತಿಸಿಕೊಂಡು ಬೆಳಗಾವಿ ಸಮೀಪದ ಬಾರ್‌ಗೆ ಕರೆದೊಯ್ದ ದುಷ್ಕರ್ಮಿಗಳು.
ಅಪರಿಚಿತರ ಜೊತೆಗೆ ತಡರಾತ್ರಿವರೆಗೆ ಪಾರ್ಟಿ ಮಾಡಿರುವ ನಿಂಗನಗೌಡ ಪಾರ್ಟಿ ಮಾಡಿದ ಬಳಿಕ ನಿಂಗನಗೌಡನ ಬಳಿ ಬಿಲ್ ಕೊಡಲು ಆತನಬಳಿ ಹಣ ಇರಲಿಲ್ಲ. ಪಾರ್ಟಿ ಮಾಡಿದ ಬಿಲ್ ಕೊಡಲು ನಿರಾಕರಿಸಿದಾಗ ಸಾಂಬ್ರಾ ಏರ್ಪೋರ್ಟ್ ಕಡೆಗೆ ಹೊತ್ತೊಯ್ದ ದುಷ್ಕರ್ಮಿಗಳು.
ಕೊಲೆ ಬಳಿಕ ನಿಂಗನಗೌಡನ ಬಳಿಯಿದ್ದ ಐಫೋನ್ ಕದ್ದೊಯ್ದಿರುವ ಆರೋಪಿಗಳು. ಇದೆ ಐಫೋನ್ ಲೋಕೇಶನ್ ಆಧರಿಸಿ ಆರೋಪಿಗಳು ಖೆಡ್ಡಾಕ್ಕೆ ಕೆಡವಿದ ಪೊಲೀಸರು. ಮಾರಿಹಾಳ ಗ್ರಾಮದ ಶಿವಾನಂದ ಕರವಿನಕೊಪ್ಪ (28) ಆಕಾಶ ಮ್ಯಾಗೋಟಿ ಹಂತಕರು.
ಆರೋಪಿ ಶಿವಾನಂದ ಕರವಿಕೊಪ್ಪ ಈ ಹಿಂದೆ ಡಬಲ್ ಮರ್ಡರ್ ಪ್ರಕರಣದ ಆರೋಪಿಯೂ ಹೌದು ಜಾಮೀನು ಮೇಲೆ ಹೊರಬಂದು ಮತ್ತೇ ಕ್ಷುಲ್ಲಕ ಕಾರಣಕ್ಕೆ ಯುವಕನ ಹತ್ಯೆಗೈದಿರುವ ಶಿವಾನಂದ.