ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಸುತ್ತಲಿನ ಗ್ರಾಮಸ್ಥರಿಗೆ ಸರ್ಕಾರದ ಕೆಲಸ ಕೊಡಿಸುವುದಾಗಿ ಹಣ ವಸೂಲಿ ಮಾಡಿರುವ ಆರೋಪವಿದೆ.
ಸರ್ಕಾರಿ ನೌಕರಿ ಕೊಡಿಸುವುದಾಗಿ ಹಣ ಪಡೆದು ನಕಲಿ ಆದೇಶ ಪ್ರತಿಗಳನ್ನ ಕೊಡುತ್ತಿದ್ದ ಬಿಜೆಪಿ ಯುವ ಮುಖಂಡನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಖಾನಪೂರ ತಾಲೂಕಿನ ಬಿಜೆಪಿಯ ಕಾನೂನು ಪ್ರಕೋಷ್ಠದ ಸಂಚಾಲಕ ಆಗಿರುವ ಆಕಾಶ್ ಅಥಣಿಕರ್ ಅರೆಸ್ಟ್ ಆಗಿದ್ದಾನೆ. ಜನರನ್ನು ನಂಬಿಸಿ ಸರ್ಕಾರಿ ನೌಕರಿ ಕೊಡಿಸುತ್ತೇನೆ ಎಂದು ಹಣ ವಸೂಲಿ ಮಾಡುತ್ತಿದ್ದನು.
ಇದಕ್ಕಾಗಿ ರಾಜ್ಯ ಸರ್ಕಾರದ ನಕಲಿ ಸಹಿ ಮತ್ತು ನಕಲಿ ಆದೇಶ ಪ್ರತಿಯನ್ನು ಜನರಿಗೆ ನೀಡುತ್ತಿದ್ದನು. ಇದೇ ರೀತಿ ತಾಲೂಕಿನ ಸುತ್ತಲಿನ ಗ್ರಾಮಸ್ಥರಿಗೆ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ.
ಮಹಿಳೆ ಒಬ್ಬರಿಗೆ ಅಂಗನವಾಡಿ ಕಾರ್ಯಕರ್ತೆ ಹುದ್ದೆ ಕೊಡಿಸುವುದಾಗಿ 30 ಸಾವಿರ ರೂಪಾಯಿ ವಸೂಲಿ ಮಾಡಿದ್ದನು. ಇದಕ್ಕಾಗಿ ಮಹಿಳೆಗೆ ನಕಲಿ ಆದೇಶ ಪ್ರತಿ ಕೊಟ್ಟು ನಂಬಿಕೆ ದ್ರೋಹ ಮಾಡಿದ್ದನು.
ಸದ್ಯ ಈ ಸಂಬಂಧ ಖಾನಾಪುರ ಠಾಣೆಯಲ್ಲಿ ಬಿಜೆಪಿ ಯುವ ಮುಖಂಡ ಆಕಾಶ್ ವಿರುದ್ಧ ನಂಬಿಕೆ ದ್ರೋಹದಡಿ ಜಯರಾಮ ಹೆಮ್ಮಣ್ಣವರ್ ಎನ್ನುವರು ದೂರು ದಾಖಲು ಮಾಡಿದ್ದಾರೆ. ಈ ದೂರು ಆಧರಿಸಿ ಪೋಲಿಸರು ಆರೋಪಿಯನ್ನು ಜೈಲಿಗಟ್ಟಿದ್ದಾರೆ.