ಉ.ಕ ಸುದ್ದಿಜಾಲ ಹುಕ್ಕೇರಿ :

ಕೆಲಸ ಮಾಡುತ್ತಿದ್ದ ಅಂಗಡಿಯನ್ನೆ ಕಳ್ಳತನ ಮಾಡಿ ಪೋಲಿಸರ ಅತಿಥಿಯಾಗಿರುವ ಘಟನೆಯೊಂದು ನಡೆದಿದ್ದು ಬಂದಿತ ಕಳ್ಳನಿಂದ 36.81.528 ರೂ. ಮೌಲ್ಯದ 643 ಗ್ರಾಂ ಬಂಗಾರದ ಆಭರಣಗಳು ವಶ ಪಡೆದುಕೊಳ್ಳಲಾಗಿದೆ.

ಹುಕ್ಕೇರಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ವರ್ಷ ಡಿಸೆಂಬರ ತಿಂಗಳಲ್ಲಿ ಬಂಗಾರ ಅಂಗಡಿ ಕಳ್ಳತನ‌ವಾಗಿದ್ದರೆ ಬಗ್ಗೆ ಹುಕ್ಕೇರಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ತನಿಖೆ ಕೈಹೊಂಡ ಪೋಲಿಸರು ಕಳ್ಳತನವಾಗಿದ್ದ ಅಂಗಡಿಯಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಗಿರೀಶ ಕಾಂತಿ ಎಂಬಾಂತ ಕಳ್ಳತನ ಮಾಡಿದ್ದು ಧೃಡವಾಗಿದೆ.

ಹುಕ್ಕೇರಿ ಪಟ್ಟಣದ ಬಂಗಾರ ಅಂಗಡಿಯಲ್ಲಿ 643 ಗ್ರಾಂ. ಬಂಗಾರದ ಆಭರಣಗಳು ಕಳ್ಳತನ ಜ.2 ರಂದು ಕಳ್ಳತನವಾದ ಜ್ಯುವೆಲರಿ ಅಂಗಡಿಯಲ್ಲಿ ಸೆಲ್ಸಮನ್ ಅಂತಾ ಕೆಲಸ ಮಾಡುವ ವ್ಯಕ್ತಿ ಗಿರೀಶನನ್ನು ಬಂಧಿಸಿ ಆತನಿಂದ ಅದೇ ದಿನ 121 ಗ್ರಾಂ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆಯಲಾಗಿತ್ತು ಬಂಧಿತ ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿತ್ತು.

ಫೆ.23 ರಂದು ಕಳ್ಳತನವಾಗಿದ್ದ ಉಳಿದ 522 ಗ್ರಾಂ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಕುರಿತು ಹುಕ್ಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.