ಉ.ಕ ಸುದ್ದಿಜಾಲ ವಿಜಯಪುರ :

ಗಾಂಧೀಜಿ ಕೊಲೆ ಮಾಡಿದವರು ಬಿಜೆಪಿಯವರು. ಧರ್ಮದ ಬಗ್ಗೆ ಮಾತನಾಡುವವರು ಕೊಲೆ ಮಾಡುವ ಬಗ್ಗೆ ಮಾತನಾಡುತ್ತಾರೆ. ಓರ್ವ ಸಚಿವ ನನ್ನ ಮುಗಿಸಿ ಬಿಡಬೇಕು ಎಂದು ಹೇಳುತ್ತಾನೆ. ನಾನು ಸಾವಿಗೆ ಹೆದರಲ್ಲ. ಅಶ್ವಥ್ ನಾರಾಯಣ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ.

ವಿಜಯಪೂರ ಜಿಲ್ಲೆಯ ಬಸವನಬಾಗೇವಾಡಿಯಲ್ಲಿ ನಡೆದ ಪ್ರಜಾ ಧ್ವನಿ ಯಾತ್ರೆ ಸಮಾವೇಶದಲ್ಲಿ ಸಿದ್ದರಾಮಯ್ಯ ಭಾಷಣ. ನನ್ನ ಸಾಯಿಸಲು ನೀವು ಬಿಡ್ತೀರಾ ನಾನು ಬಡವರ ಪರವಾಗಿ ಕೆಲಸ ಮಾಡಿದ್ದೇನೆ. ಬಡವರ ರೈತರ ಪರ ಕೆಲಸ ಮಾಡಿದ್ದೇವೆ. ಹಲವರು ಭಾಗ್ಯಗಳನ್ನು ಎಲ್ಲಾ ಕೋಮಿನ‌ ಜನರಿಗಾಗಿ ಜಾರಿ ಮಾಡಿದ್ದೇನೆ..

ನಿಮ್ಮ ಆಶಿರ್ವಾದಿಂದ ಅಧಿಕಾರಕ್ಕೆ ಬಂದರೆ ಐದು ಸಾವಿರ ಕೋಟಿ ಅಲ್ಪಸಂಖ್ಯಾತರಿಗೆ ನೀಡುತ್ತೇವೆ. ಜಮೀರ್ ಅಹಮದ್ ಗೆ ಕಡೆಗೆ ನೋಡಿ ಜಮೀರ್ ಅಲ್ಪಸಂಖ್ಯಾತರಿಗೆ ಐದು ಸಾವಿರ ಕೋಟಿ ಕೊಡ್ತೇವೆ ಎಂದ ಸಿದ್ದರಾಮಯ್ಯಗೆ ಕೈಮುಗಿದ ಜಮೀರ್. ನಾವು ಅಧಿಕಾರಕ್ಕೆ ಬಂದ ಕೂಡಲೇ ಹತ್ತು ಕೆಜಿ ಅಕ್ಕಿ ಉಚಿತವಾಗಿ ನೀಡುತ್ತೇವೆ.

ಇನ್ನೂ ಹೆಚ್ವಿನ ನೀರಾವರಿ ಯೋಜನೆಗಳನ್ನು ಜಾರಿ ಮಾಡುತ್ತೇವೆ. ಉಚಿತವಾಗಿ ವಿಮೆ ಕೊಡುವ ಯೋಚನೆ ಇದೆ ಎಂದ ಸಿದ್ದರಾಮಯ್ಯ. ಈ ಬಾರಿ ಬಸವನಬಾಗೇವಾಡಿ ಕ್ಷೇತ್ರಕ್ಕೆ ಹಾಲಿ ಶಾಸಕ‌ ಶಿವಾನಂದ ಪಾಟೀಲ್ ಗೆ ಆಶಿರ್ವಾದ ಮಾಡಿ.

ಶಿವಾನಂದ ಪಾಟೀಲ್ ಗೆ ಮತ ಹಾಕಿದರೆ ಅದು ನನಗೆ ಮತ ಹಾಕಿದಂತೆ. ಮತ್ತೊಮ್ಮೆ ಶಿವಾನಂದಗೆ ಅವಕಾಶ ನೀಡಿ ಎಂದು ಸಿದ್ದರಾಮಯ್ಯ ಮನವಿ..