ಉ.ಕ ಸುದ್ದಿಜಾಲ ವಿಜಯಪೂರ :

ಉತ್ತರ ಕರ್ನಾಟಕ ಭಾಗದಲ್ಲಿ ತಮ್ಮದೆ ಛಾಪು ಮೂಡಿಸಿರುವ ವಿಜಯಪೂರ ಸಿದ್ದೇಶ್ವರ ಸ್ವಾಮೀಜಿಗಳ‌ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ದಿನಂಪ್ರತಿ ಭಕ್ತರು ಆಗಮಿಸುತ್ತಿದ್ದಾರೆ. ಈಗಾಗಲೇ ಫೇಸಬುಕ್ ಲೈವ್ ಅಲ್ಲೂ ಕೂಡಾ ಸ್ವಾಮೀಜಿಗಳ ದರ್ಶನ ವ್ಯವಸ್ಥೆ ಕೂಡಾ ಮಾಡಲಾಗಿದೆ.

ಸಿದ್ದೇಶ್ವರ ಶ್ರೀಗಳ ಆರೋಗ್ಯ ನೊಡಿಕೊಳ್ಳುತ್ತಿರುವ ವೈದ್ಯರಿಂದ ಮಾದ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಸಿದ್ದೇಶ್ಚರ ಶ್ರೀಗಳ ಆರೋಗ್ಯ ಕುರಿತು ಮಾಹಿತಿ ಬಿಡುಗಡೆ ಡಾ.ಮಲ್ಲಣ್ಣ ಮೂಲಿಮನಿ ಮಾಹಿತಿ ಪರಮಪೂಜ್ಯ ಸಿದ್ದೇಶ್ವರ ಸ್ವಾಮೀಜಿಗಳ ಆರೋಗ್ಯ ಸ್ಥಿರವಾಗಿದೆ. ನೀರು ಕುಡಿದಿದ್ದಾರೆ.

ಎಂ.ಬಿ.ಪಾಟೀಲ್ ರ ಜೊತೆ ಸನ್ನೆ ಮೂಲಕ ಮಾತನಾಡಿದ್ದಾರೆ. ಬೆಳಿಗ್ಗೆಗಿಂತ ಇಂದು ಸಂಜೆ ಆರೋಗ್ಯ ಚನ್ನಾಗಿದೆ. ಆಕ್ಸಿಜನ್ ಪೂರೈಕೆ, ಉಸಿರಾಟ ಚನ್ನಾಗಿದೆ. ಶ್ರೀಗಳ ಆರೋಗ್ಯ ಸುಧಾರಿಸುತ್ತಿದೆ ಎಂದು ಹೇಳಿದ್ದಾರೆ.