ಉ.ಕ ಸುದ್ದಿಜಾಲ ಅಥಣಿ :

ಹರಿಹರ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿಯವರ ಪೂರ್ವಾಶ್ರಮ ತಂದೆ ದುಂಡಪ್ಪ ಅದೃಶಪ್ಪ ಗೌರಗೊಂಡ (75) ನಿಧನರಾಗಿದ್ದಾರೆ.

ಕಳೆದ ಎಂಟು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಪಕ್ಕದ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಮಿರಜ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಲಿಂಗಕ್ಯರಾಗಿದ್ದಾರೆ.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ಸಂಜೆ ಐದು ಗಂಟೆಗೆ ಅಂತ್ಯ ಸಂಸ್ಕಾರ ನೆರವೇರಿತು. ಹರಿಹರ ಪೀಠದ ಪಂಚಮಸಾಲಿ ಜಗದ್ಗುರುಗಳಾದ ವಚನಾನಂದ ಶ್ರೀಗಳು ತಮ್ಮ ತಂದೆಯವರ ಅಂತಿಮ ದರ್ಶದ ಪಡೆದರು.

ಅಲಗೂರ ಪೀಠದ ಪಂಚಮಸಾಲಿ ಜಗದ್ಗುರುಗಳಾದ ಡಾ, ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳು ಬ್ರಹನ್ಮಠ ಬಬಲೆಶ್ವರ್ ಗುರುಗಳು ದರ್ಶನ ಪಡೆದರು. ಶಶಿಕಾಂತ ಪಡಸಲಗಿ ಗುರುಗಳು ಸೇರಿದಂತೆ ಹಲವಾರು ಅಂತ್ಯ ಸಂಸ್ಕಾರದಲ್ಲಿ ಭಾಗಿ.