ಉ.ಕ ಸುದ್ದಿಜಾಲ ವಿಜಯಪುರ :
ನಡೆದಾಡುವ ದೇವರೆಂದು ಹೆಸರುವಾಸಿಯಾಗಿರುವ ಸಿದ್ದೇಶ್ವರ ಸ್ವಾಮೀಜಿಗಳು ಇಂದು ಸಾಯಂಕಾಲ 6 ಗಂಟೆ 05 ನಿಮಿಷಕ್ಕೆ ಲಿಂಗಕ್ಯರಾಗಿದ್ದಾರೆ ಎಂದು ವಿಜಯಪೂರ ಜಿಲ್ಲಾಧಿಕಾರಿ ಮಹಾಂತೇಶ ದಾನಮ್ಮನವರ ಹೇಳಿದ್ದಾರೆ
ವಿಜಯಪುರದ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ (82) ವಿಜಯಪೂರದಲ್ಲಿ ಸುದ್ದಿಗೋಷ್ಠಿ ಮೂಲಕ ಡಿಸಿ ವಿಜಯ ಮಹಾಂತೇಶ್ ದಾನಮ್ಮನವರ ಹೇಳಿದ್ದಾರೆ. ಇಂಗ್ಲಿಷ್ ಔಷಧಿ ಚಿಕಿತ್ಸೆ ನಿರಾಕರಿಸಿದ್ದ ಸಿದ್ದೇಶ್ವರ ಶ್ರೀ ಪ್ರಧಾನಿ ನರೇಂದ್ರ, ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೆಚ್ಚಿನ ಚಿಕಿತ್ಸೆಗೆ ಮನವಿ ಮಾಡಿದ್ದರೂ ಕೈಮುಗಿದು ನಿರಾಕರಿಸಿದ್ದ ಶ್ರೀಗಳು.
ತಿಂಗಳು ಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಾಮೀಜಿ. ವಯೋಸಹಜ ಅನಾರೋಗ್ಯದಿಂದ ತಿಂಗಳು ಕಾಲ ದ್ರವಾಹಾರದ ಮೇಲಿದ್ದ ಶ್ರೀಗಳು. ಆಶ್ರಮದ ಕೊಠಡಿಯಲ್ಲಿ ವೈದ್ಯರು ಚಿಕಿತ್ಸೆ ಮುಂದುವರೆಸಿದ್ರು. ನಾನು 80 ವರ್ಷ ಬದುಕಬೇಕಾಗಿತ್ತು, ಎರಡುಮೂರು ವರ್ಷ ಹೆಚ್ಚಾಗಿದೆ ಎಂದು ದೇಹ ತ್ಯಾಗ ಮಾಡಲು ನಿಶ್ಚಯಿಸಿದ್ದ ಸಂತ..
ತಮಗಿರುವ ಕಾಯಿಲೆ ಬಗ್ಗೆ ಮೊದಲೇ ನಾಲ್ಕೈದು ತಿಂಗಳ ಹಿಂದೆ ಗೊತ್ತಿದೆ ಎಂದು ಕನ್ನೇರಿಮಠದ ಶ್ರೀಗೆ ಹೇಳಿದ್ದ ಸಿದ್ದೇಶ್ವರ ಶ್ರೀ. ವಿಜಯಪುರ ಜಿಲ್ಲೆಯ ಎಲ್ಲಾ ಸರ್ಕಾರಿ ಕಾಲೇಜುಗಳಿಗೆ ರಜೆ ಘೋಷಣೆ. ನಾಳೆ ಅಂತ್ಯಕ್ರಿಯೆ ನಡೆಯಲಿದೆ. ಬೆಳಿಗ್ಗೆ ಜಾವದವರೆಗೆ 4 ಗಂಟೆಯವರೆಗೆ ಆಶ್ರಮದಲ್ಲಿ ಸಾರ್ವಜನಿಕ ವ್ಯವಸ್ಥೆ.
ಬೆಳಿಗ್ಗೆ 4 ಗಂಟೆಯ ನಂತರ ಸೈನಿಕ ಶಾಲೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ. ನಾಳೆ ಸಾಯಂಕಾಲ 5ಗಂಟೆಗೆ ಜ್ಞಾನ ಯೋಗಾಭ್ಯಾಸದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ.