ಉ.ಕ ಸುದ್ದಿಜಾಲ ಕಲಬುರಗಿ :
ಡ್ರೈವರ್ ಕಂ ಕಂಡಕ್ಟರ್ ಹುದ್ದೆ ಪಡೆಯಲು ಅಭ್ಯರ್ಥಿಗಳ ನಾನಾ ಕಸರತ್ತು. ತೊಡೆಗೆ ಗೋಧಿ ಹಿಟ್ಟು ಮೆತ್ತಿ ಮೇಲೆ ಬಟ್ಟೆ ಕಟ್ಟಿಕೊಂಡು ದೈಹಿಕ ಪರೀಕ್ಷೆಗೆ ಹಾಜರಾದ ಅಭ್ಯರ್ಥಿ. ಪಿಎಸ್‌ಐ ಪರೀಕ್ಷಾ ಹಗರಣವನ್ನ ಮೀರಿಸುವಂತಿದೆ ಕೆಆರ್‌ಟಿಸಿ ಡ್ರೈವರ್ ಕಂ ಕಂಡಕ್ಟರ್ ನೇಮಕಾತಿ ಅಕ್ರಮ.
ಕೆಆರ್‌ಟಿಸಿ ಡ್ರೈವರ್ ಕಂ ಕಂಡೆಕ್ಟರ್ ಹುದ್ದೆಗಳಿಗೆ ನಡೆಯುತ್ತಿರುವ ಎತ್ತರ ಮತ್ತು ತೂಕ ಅಳತೆ ಪರೀಕ್ಷೆ. ತೂಕ ಅಳತೆ ವೇಳೆ ಅಭ್ಯರ್ಥಿ ಓರ್ವನ ಮೇಲೆ ಅಧಿಕಾರಿಗಳಿಗೆ ಅನುಮಾನ. ಈ ವೇಳೆ ಅಭ್ಯರ್ಥಿಯ ಪ್ಯಾಂಟ್ ಬಿಚ್ಚಿಸಿ ಪರಿಶೀಲಿಸಿದ ಅಧಿಕಾರಿಗಳೇ ಶಾಕ್.
ತೂಕ ಕಡಿಮೆ ಇದ್ದ ಹಿನ್ನೆಲೆ ತೊಡೆಗೆ ಗೋಧಿ ಹಿಟ್ಟು ಕಟ್ಟಿಕೊಂಡು ಬಂದಿದ್ದ ಅಭ್ಯರ್ಥಿ. ಅಭ್ಯರ್ಥಿಯನ್ನ ಪರಿಶೀಲಿಸಿ ನೇಮಕಾತಿ ಬ್ಲಾಕ್ ಲಿಸ್ಟ್ ಗೆ ಹಾಕಿದ ಕೆಆರ್‌ಟಿಸಿ ಅಧಿಕಾರಿಗಳು. ಕಲಬುರಗಿಯಲ್ಲಿ 1,619 ಹುದ್ದೆಗಳಿಗೆ ನಡೆಯುತ್ತಿರುವ ದೈಹಿಕ ಪರೀಕ್ಷೆ.