ಉ.ಕ ಸುದ್ದಿಜಾಲ ಮುಗಳಖೋಡ :

ಮುಗಳಖೋಡದ ಜಿಡ್ಗಾ ಮಠದಲ್ಲಿ ಚಪ್ಪಲಿ ಧರಿಸಿ ಬಂದ ಸಿಎಂ ಬಸವರಾಜ ಬೊಮ್ಮಾಯಿ. ನಿನ್ನೆ ನಡೆದ ಮಾಳಿ ಮಾಲಗಾರ ಸಮಾವೇಶ ಸಮಯದಲ್ಲಿ ನಡೆದ ಅಚಾತುರ್ಯ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ಸಾವಿರಾರು‌ ಸಂಖ್ಯೆಯಲ್ಲಿ ನಡೆದ ಮಾಳಿ, ಮಾಲಗಾರ ಸಮಾವೇಶಕ್ಕೇ ಅಗಮಿಸುವ ಮೊದಲು ಜಿಡ್ಗಾ ಮಠಕ್ಕೆ ಭೇಟಿ ನೀಡೊದ ಸಿಎಂ ಸಿಎಂ ಬೊಮ್ಮಾಯಿಗೆ ಕಂಟಕವಾಗಲಿದೆಯಾ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮುಗಳಖೋಡದ ಸಮಾವೇಶ?

ಕೆಲಹೊತ್ತು ಗೊಂದಲದ ವಾತಾವರಣ. ಮಠದೊಳಗೆ ಯಾವ ರಾಜಕಾರಣಿಯೂ ಇಲ್ಲಿಯವರೆಗೆ ಚಪ್ಪಲಿ ಧರಿಸಿ ಬಂದಿರಲಿಲ್ಲ. ಸದ್ಯ ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟ ಸನ್ನಿವೇಶ. ಸಿಎಂ ಬೆಂಗಾವಲಿಗೆ ಬಂದಿದ್ದ ಪೋಲಿಸರು ಕೂಡ ಶೂ ಧರಿಸಿ ಬಂದಿರುವ ಫೋಟೊ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.