ಉ.ಕ ಸುದ್ದಿಜಾಲ ಬೆಳಗಾವಿ :

ಕನ್ನಡ ಭವನ ಅತ್ಯಂತ ಸಂತೋಷದಿಂದ ಉದ್ಘಾಟಿಸಿದ್ದೇನೆ, ಬೆಳಗಾವಿಯಲ್ಲಿ ಇಷ್ಟು ವ್ಯವಸ್ಥಿತ ಕನ್ನಡ ಭವನ ಉದ್ಘಾಟನೆ ಭವಿಷ್ಯದಲ್ಲಿ ಕನ್ನಡಕ್ಕೆ ಉಜ್ವಲ ಭವಿಷ್ಯ ಇದೆ ಎಂಬುದು ನನ್ನ ಭಾವನೆ ಎಂದು ಸಿಎಂ ಬೊಮ್ನಾಯಿ ಹೇಳಿದರು

ಬೆಳಗಾವಿಯಲ್ಲಿ ಕನ್ನಡ ಭವನ ರಂಗಮಂದಿರ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಮಾತನಾಡಿದರು ಸಂಸ್ಕೃತಿ, ಭಾಷೆಗೂ ಬಹಳ ನಿಕಟವಾದ ಸಂಬಂಧ ಒಂದು ಭಾಷೆ ನಾಡಿಗೂ, ದೇಶಕ್ಕೂ ಮುಖ್ಯ ಸಂಸ್ಕೃತಿ ಇಲ್ಲದೇ ನಾವು ಮನುಷ್ಯರಾಗಿ ಬಳಸಲು ಸಾಧ್ಯವಿಲ್ಲ.

ಈ ಸಂಸಾರದಲ್ಲಿ ಮನುಷ್ಯ ಹಾಗೂ ಪ್ರಾಣಿಗೆ ಇರುವ ವ್ಯತ್ಯಾಸ ಇಷ್ಟೇ ನಮಗೆ ಹೆಚ್ಚಿನ ಬುದ್ದಿಶಕ್ತಿ ಅಭಿವ್ಯಕ್ತ ಮಾಡುವ ಶಕ್ತಿ ಕೊಟ್ಟಿದ್ದಾನೆ. ಭಗವಂತ ಕೊಟ್ಟ ಶಕ್ತಿ ಹೇಗೆ ಬಳಕೆ ಮಾಡ್ತೀವಿ ಮುಖ್ಯ ಇದರ ಮೇಲೆ ನಮ್ಮ ಕ್ರಿಯೆ, ಪ್ರತಿಕ್ರಿಯೆ ಸಂಸ್ಕೃತಿ ನಿಂತಿದೆ.

ಮನು ಕುಲದ ಅಭಿವೃದ್ಧಿಯಲ್ಲಿ ಭಾಷೆ ಬಹಳ ಮುಖ್ಯ ಕೆಲಸ. ಮನುಷ್ಯರಲ್ಲಿ ತತ್ವ ಆದರ್ಶ, ಆದ್ಯಾತ್ಮ ಶಕ್ತಿ ಅಳವಡಿಸಿಕೊಳ್ಳಲು ಭಾಷೆ ಉಪಯುಕ್ತ. ಕನ್ನಡ ಬಹಳ ಶ್ರೀಮಂತವಾಗಿದೆ. ಪಂಪ, ರನ್ನ, ರಾಘವಾಂಕ ರಿಂದ ಈಗಿನ ನೂತನ ಸಾಹಿತಿಗಳವರೆಗೂ ದೊಡ್ಡ ಕೊಡುಗೆ. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಬಂದಿದ್ದು ಕನ್ನಡಕ್ಕೆ

ಅತ್ಯಂತ ಪ್ರಾಚೀನ ಭಾಷೆ ಕನ್ನಡ, ತಮಿಳು ದವರು ತಮ್ಮದು ಅಂತಾರೆ ಆದ್ರೆ ಇತ್ತೀಚೆಗೆ ಶಿಲೆ ಸಿಕ್ಕಿದೆ. ವಚನ ಸಾಹಿತ್ಯ, ದಾಸ ಸಾಹಿತ್ಯ ಕನ್ನಡವನ್ನು ಶ್ರೀಮಂತಗೊಳಿಸಿದೆ. ಇದನ್ನ ಇಡೀ ನಾಡಿಗೆ ಅಷ್ಟೇ ಅಲ್ಲ ದೇಶಕ್ಕೆ ತಿಳಿಸಬೇಕು ಸಂಕೋಚಿತ ಮನೋಭಾವದಿಂದ ಹೊರ ಬರಬೇಕು ಸ್ವಾತಂತ್ರ್ಯ ಬಳಿಕ ಇಂಗ್ಲಿಷ್ ಮಾತನಾಡುವ ವ್ಯಾಮೋಹ ಬಹಳಿತ್ತು.

ಎಲ್ಲ ಭಾಷೆ ಕಲಿಬೇಕು‌ ಆದರೆ ನಮ್ಮತನ ಬಿಟ್ಟುಕೊಡಬಾರದು. ನಾನು ಸಿಎಂ ಆಗಿರಬಹುದು ನನ್ನ ಕರ್ನಾಟಕ ಸಿಎಂ, ಕನ್ನಡ ಮುಖ್ಯಮಂತ್ರಿ ಅಂತಾರೆ. ಕನ್ನಡ ದಿನನಿತ್ಯ ಬಳಕೆ ಮಾಡಿದ್ರೆ ಬೆಳವಣಿಗೆ ಆಗುತ್ತೆ. ನಮ್ಮ ಕನ್ನಡಕ್ಕೆ ಅಂತರ್ಗತವಾದ ಶಕ್ತಿ ಇದೆ

ಈ ಭೂಮಿಯಲ್ಲಿ ಯಾವುದೇ ಶಕ್ತಿಗೂ ಕನ್ನಡ ಅಳಿಸಲು ಸಾಧ್ಯವಿಲ್ಲ. ಕನ್ನಡ ಭಾಷೆಯ ಶಕ್ತಿ ಬಳಸಿದ್ರೆ ಕನ್ನಡವೂ ಬೆಳೆಯುತ್ತೆ, ನಾವು ಬೆಳೆಯುತ್ತೇವೆ.ಬಕನ್ನಡ ಭಾಷೆಗೆ ಆತಂಕ ಬಂದಿದೆ ಅಂತಾರೆ ಆದ್ರೆ ಅವರ ಆತಂಕವನ್ನು ಕನ್ನಡ ಆತಂಕ ಅಂತಾರೆ

ಸಕಾರಾತ್ಮಕ ಮುಂದೆ ಹೋದಾಗ ನಮಗೆ ಉತ್ತಮ ಭವಿಷ್ಯ ಇದೆ. ಯಾವುದೇ ಕ್ಷೇತ್ರದಲ್ಲಿ ಸಾಧ‌ನೆ ಮಾಡಿ ಯಾವುದೇ ದೇಶಕ್ಕೆ ಹೋಗಿ ಆದ್ರೆ ಆ ಸಾಧನೆ ಕನ್ನಡದಿಂದ ಇದೇ ಮರಿಯಬೇಡಿ ಎಂದರು.