ಉ.ಕ ಸುದ್ದಿಜಾಲ ಅಥಣಿ :

ಕೃಷ್ಣಾ ನದಿಯಲ್ಲಿ ನೀರಿಲ್ಲದೆ ಸಂಪೂರ್ಣವಾಗಿ ಬತ್ತಿದ ಹಿನ್ನಲೆ ಮರಳು ಮಾಫೀಯಾ ಮಾಡಲು ಮುಂದಾದ ಆರೋಪಿಗಳನ್ನ ಹಾಗೂ 25 ಟ್ರ್ಯಾಕ್ಟರ ನಾಲ್ಕು ಜೆಸಿಬಿ ವಶ ಪಡಿಸಿಕೊಂಡ ಅಥಣಿ ಪೋಲಿಸರು. ಸ್ಥಳಕ್ಕೆ ಬೆಳಗಾವಿ ಎಸ್‌ಪಿ ಡಾ.ಸಂಜೀವ ಪಾಟೀಲ ಬೇಟಿ ನೀಡಿ ಪರಶೀಲನೆ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಹಿಷವಾಡಗಿ ಗ್ರಾಮದಲ್ಲಿ ಆಕ್ರಮವಾಗಿ ಮರಳು ಸಾಗಿಸಲಾಗುತ್ತಿತ್ತು. ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ವ್ಯಕ್ತಿಗಳನ್ನ ಅಥಣಿ ಪೋಲಿಸರು ವಶಕ್ಕೆ ಪಡೆದಿದ್ದಾರೆ.

ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತಿದ ಹಿನ್ನಲೆ ಮರಳು ಮಾಫೀಯಾ ಪ್ರಾರಂಭಿಸಲಾಗಿದ್ದು ಮರಳು‌ ಮಾಪಿಯಾ ಬಗ್ಗೆ ಮಾಹಿತಿ ಪಡೆದ ಅಥಣಿ ಪೋಲಿಸರು. ಒಬ್ಬ ಸಿಪಿಐ ಹಾಗೂ ಮೂವರು ಪಿಎಸ್‌ಐ ನೇತೃತ್ವದಲ್ಲಿ ದಾಳಿ ಅಥಣಿ ಸಿಪಿಐ ರವೀಂದ್ರ ನಾಯಕೊಡಿ, ಅಥಣಿ ಪಿಎಸ್ಐ ಗಳಾದ ರಾಕೇಶ ಬಗಲಿ, ಶಿವಶಂಕರ ಮುಕರಿ,  ಚಂದ್ರಕಾಂತ ಸಾಗನೂರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಎಸ್ಪಿ ಡಾ.ಸಂಜೀವ ಪಾಟೀಲಗೆ ಅಥಣಿ ಡಿಎಸ್‌ಪಿ ಶ್ರೀಪಾದ ಜಲ್ಡೆ ಹಾಗೂ ಸಿಪಿಐ ರವೀಂದ್ರ ನಾಯಕೂಡಿ ಸಾಥ್ ನೀಡಿದ್ದಾರೆ. ಅಥಣಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.