ಉ.ಕ ಸುದ್ದಿಜಾಲ ಚಿಕ್ಕೋಡಿ :
ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ನೀರು ಬಿಡುಗಡೆ. ಮತ್ತೆ ಕೃಷ್ಣಾ ನದಿಗೆ ಹರಿದು ಬಂತು 1500 ಕ್ಯೂಸೆಕ್ ನೀರು ಮತ್ತೆ ಕೃಷ್ಣಾ ಒಡಲಿಗೆ ಅಲ್ಪ ಪ್ರಮಾಣದ ನೀರು ಬಿಟ್ಟಿದ್ದರಿಂದ ಗಡಿ ಭಾಗದ ಜನರಲ್ಲಿ ಸಂತೋಷ.
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲೂಕಿನ ರಾಜಾಪುರ ಬ್ಯಾರೇಜ್ ಮೂಲಕ ನೀರು ಹರಿಸಿದ ಮಹಾರಾಷ್ಟ್ರ ಸರ್ಕಾರ 1500 ಕ್ಯೂಸೇಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗಿದೆ.
ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಕರ್ನಾಟಕಕ್ಕೆ ನೀರು ಹರಿಸಿದ ಮಹಾರಾಷ್ಟ್ರ ಸರ್ಕಾರ. ಗಡಿ ಭಾಗದಲ್ಲಿ ಕಳೆದ ಒಂದು ತಿಂಗಳಿನಿಂದ ನಿಕರಿಲ್ಲದೆ ಪರದಾಡುತ್ತಿದ್ದ ಕುಟುಂಬಗಳಿಗೆ ಮತ್ತೆ ಸ್ವಲ್ಪ ಚೈತನ್ಯ ತುಂಬಿದಂತಾಗಿದೆ.