ಉ.ಕ ಸುದ್ದಿಜಾಲ ಬೆಳಗಾವಿ :
ಚಳಿಗಾಲದ ಅಧಿವೇಶನ ಹಿನ್ನಲೆ ರಾಜ್ಯ ಸರ್ಕಾರದ ವಿರುದ್ದ ಸಾಲು ಸಾಲು ಪ್ರತಿಭಟನೆ. ಇಂದು ರಾಜ್ಯಾದ್ಯಂತ ಪಂಚಮಸಾಲಿ ಮೀಸಲಾತಿ ಪ್ರತಿಭಟನೆ ವಿಚಾರ. ಪಂಚಮಸಾಲಿ ಪ್ರತಿಭಟನೆ ಕಾವಿನ ಮಧ್ಯೆಯೇ ಬೆಳಗಾವಿಯಲ್ಲಿ ಸಾಲು ಸಾಲು ಪ್ರತಿಭಟನೆ..
ಇಂದು ರಾಜ್ಯಾದ್ಯಂತ ರಸ್ತೆ ತಡೆದು ತಾಲೂಕು ಮತ್ತು ಜಿಲ್ಲಾ ಕೇಂದ್ರದಲ್ಲಿ ರಸ್ತೆ ತಡೆಗೆ ಕರೆ ನೀಡಿದ ಪಂಚಮಸಾಲಿ ಸಮುದಾಯ.ಇಂದು ಬೆಳಗಾವಿಯಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿರುವ ವಿವಿಧ ಸಂಘಟನೆಗಳು.
ಕೊಂಡಸ ಕೊಪ್ಪದಲ್ಲಿ ಕಾರ್ಮಿಕರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಎಐಟಿಯುಸಿ-ಯಿಂದ ಬೃಹತ ಪ್ರತಿಭಟನೆ. ಅನುದಾನ ರಹಿತ ಶಾಲಾ ಕಾಲೇಜುಗಳಿಂದ ಅನುದಾನಕ್ಕೆ ಆಗ್ರಹಿಸಿ ಪ್ರತಿಭಟನೆ. ಎಲ್ ಸಿ ಆರ್ ಪಿ ಗಳ ಗೌರವಧನ ಹಾಗೂ ಇಎಸ್ಐ,ಪಿಎಫ್ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ.
ಪಂಚಾಯಿತಿ ಮಟ್ಟದ ಮುಖ್ಯ ಪುಸ್ತಕ ಬರಹಗಾರರ ಪ್ರತಿಭಟನೆ. ಭೂಮಾಪಕರಿಂದ ಕನಿಷ್ಠ ವೇತನ ಮತ್ತು ಖಾಯಂಮಾತಿಗೆ ಆಗ್ರಹಿಸಿ ಪ್ರತಿಭಟನೆ. ಕಬ್ಬು ಬೆಳೆಗಾರರ ಸಂಘದಿಂದ ಬೆಂಬಲ ಬೆಲೆಗೆ ಆಗ್ರಹಿಸಿ ರೈತರಿಂದ ಪ್ರತಿಭಟನೆ.
ಇಂದು ಒಟ್ಟು 10 ಸಂಘಟನೆಗಳಿಂದ ಪ್ರತಿಭಟನೆಗೆ ಅವಕಾಶ ನೀಡಿರುವ ಬೆಳಗಾವಿ ಜಿಲ್ಲಾಡಳಿತ.