ಹಲವೆಡೆ 2A ಮೀಸಲಾತಿಗಾಗಿ ರಸ್ತೆಗೆ ಇಳಿದು ಪ್ರತಿಭಟನೆ

ಬೆಳಗಾವಿಯಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಹಲವು ಪ್ರತಿಭಟನೆಗಳು

ಉ.ಕ ಸುದ್ದಿಜಾಲ‌ ಬೆಳಗಾವಿ :

ಮಾಜಿ ಸಿಎಮ್ ಎಸ್ ಎಮ್ ಕೃಷ್ಣಾ ನಿಧನದ ಹಿನ್ನೆಲೆಯಲ್ಲಿ ಸರ್ಕಾರ ರಜೆ ಘೋಷಿಸಿದ್ದರಿಂದ ಬೆಳಗಾವಿಯ ಚಳಿಗಾಲದ ಅಧಿವೇಶನ ನಿನ್ನೆ ಮೋಟಕುಗೊಂಡಿತ್ತು ಇಂದು ಚಳಿಗಾಲ ಅಧಿವೇಶನ ಮರು ಪ್ರಾರಂಭವಾಗುತ್ತಿದಂತೆಯೇ ಮತ್ತೆ ಸಾಲು ಸಾಲು ಪ್ರತಿಭಟನೆಗಳು ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದು ಆ ಕುರಿತ ಒಂದು ವರದಿ ಇಲ್ಲಿದೆ ನೋಡಿ…

ಸರ್ಕಾರಕ್ಕೆ ಮತ್ತೆ ತಲೆ ನೋವಾದ ಪಂಚಮಸಾಲಿ ಹೋರಾಟ….

ಹಳ್ಳಿ ಮತ್ತು ತಾಲೂಕು ಕೇಂದ್ರ ಸೇರಿದಂತೆ ಹಲವೆಡೆ
ರಾಜ್ಯ ಹೆದ್ದಾರಿ ತಡೆದು ಸರ್ಕಾರದ ವಿರುದ್ಧ ಪಂಚಮಸಾಲಿ ಸಮುದಾಯದ ಆಕ್ರೋಶ. ರಸ್ತೆ ತೆರವುಗೊಳಿಸಲು ಪೋಲಿಸರ ಹರಸಾಹಸ..

ಪಂಚಮಸಾಲಿ ೨ಎ ಮೀಸಲಾತಿ ಹೋರಾಟದ ಸಂದರ್ಭದಲ್ಲಿ ನಡೆದ ಲಾಠಿ ಚಾರ್ಜ್ ಖಂಡಿಸಿ ಇಂದು ಮತ್ತೆ ಪಂಚಮಸಾಲಿ 2 A ಮೀಸಲಾತಿ ಹೋರಾಟಗಾರರು ರಾಜ್ಯ, ತಾಲೂಕು, ಮತ್ತು ಜಿಲ್ಲಾ ಕೇಂದ್ರದಲ್ಲಿ ರಸ್ತೆ ತಡೆದು ಸರ್ಕಾರ ಹಾಗೂ ಪೊಲೀಸರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿಯ ಹೀರೆ ಬಾಗೇವಾಡಿ ಟೋಲ್ ನಾಕಾ ಬಳಿ ಕೂಡಲ ಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸಮ್ಮುಖದಲ್ಲಿ ನಡೆದ ಪ್ರತಿಭಟನೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚರದ ಕ್ರಮ ವಹಿಸಿದರು‌…

ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಹೈಡ್ರಾಮಾ ನಡೆಸಿದರಲ್ಲದೆ ಈ ಸಂದರ್ಭದಲ್ಲಿ ಮಾತನಾಡಿದ ಬಸವಜಯಮೃತ್ಯುಂಜಯ ಸ್ವಾಮೀಜಿ.ಸಿಎಂ ಸಿದ್ದರಾಮಯ್ಯ ಪಂಚಮಸಾಲಿ ಸಮುದಾಯದ ಕ್ಷಮ ಕೇಳಬೇಕು.ಹೋರಾಟಗಾರರ ಮೇಲೆ ದಾಖಲಾದ ಎಫ ಐ ಆರ್ ಗಳನ್ನ ಕೂಡಲೇ ರದ್ದುಗೊಳಿಸಬೇಕು. ಲಾಠಿ ಚಾರ್ಜ್ ನಡೆಸಿದ ಪೊಲೀಸರನ್ನ ಅಮಾನತುಗೊಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಬೆಳಗಾವಿಯ ಸುವರ್ಣ ಸೌಧದ ಗಾರ್ಡನ ಮತ್ತು ಕೊಂಡಸಕೋಪ್ಪದ ಬಳಿ ವಿವಿಧ ಸಂಘಟನೆಗಳು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆಯನ್ನು ನಡೆಸಿದರು.

ಈ ಸಂದರ್ಭದಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಹಣ ಠೇವಣಿ ಮಾಡಿ ಮೋಸಹೋದ TPJP ಸಂಘ ಹಾಗೂ ಕಳೆದ 29 ಅನುದಾನ ಭಾಗ್ಯ ಸಿಗದ ಕನ್ನಡ ಶಾಲಾ ಶಿಕ್ಷಕರು 1995 ರಿಂದ ಪ್ರಾರಂಭವಾದ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವಂತೆ ಆಗ್ರಹಿಸಿ ಶಾಲಾ ಶಿಕ್ಷಕರು ಮತ್ತು ಆಡಳಿತ ಮಂಡಳಿ ಪ್ರತಿಭಟನೆ ನಡೆಸಿದರೆ, ಕಬ್ಬು ಬೆಳೆಗಾರರ ಸಂಘದಿಂದ ಎಫ್ ಆರ್ ಪಿ ದರ ಹೆಚ್ಚಳ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಯಿತು.

ಇನ್ನು ಭೂ ಮಾಪನ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಭೂ ಮಾಪಕರು ಸರ್ಕಾರಿ ನೌಕರರಾಗಿ ಪರಿಗಣಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು..

ಹೀಗೆ ಒಟ್ಟು 10 ಕ್ಕೂ ಹೆಚ್ಚು ವಿವಿಧ ಸಂಘಟನೆಗಳಿಂದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

ಒಟ್ಟಾರೆಯಾಗಿ ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಒಂದು ಕಡೆ ಸರ್ಕಾರಕ್ಕೆ ತಲೆನೋವುಂಟು ಮಾಡಿದರೆ ಇನ್ನೊಂದು ಕಡೆ ವಿವಿಧ ಸಂಘಟನೆಗಳು ಸರ್ಕಾರಕ್ಕೆ ತಮ್ಮ ಹೋರಾಟದ ಮೂಲಕ ವಿವಿಧ ಬೇಡಿಕೆಗಳಿಗೆ ಅಹವಾಲು ಸಲ್ಲಿಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿವೆ.

ಇನ್ನು ಪ್ರತಿಭಟನಾ ಸ್ಥಳಕ್ಕೆ ಸಚೀವ ಸಂತೋಷ್ ಲಾಡ್ ಭೇಟಿ ನೀಡಿ ಪ್ರತಿಭಟನಾಕಾರರು ಮನವಿ ಸ್ವೀಕರಿಸಿ ಸಮಸ್ಯೆ ಬಗೆಹರಿಸುವ ಭರವಸೆಯನ್ನ ನೀಡಿದರು.