ಉ.ಕ ಸುದ್ದಿಜಾಲ ಹುಕ್ಕೇರಿ :

ನ್ಯಾಯಾಲಯದ ಆವರಣದ ಗ್ರಂಥಾಲಯದಲ್ಲಿ ಮಹಿಳಾ ಲಾಯರ್ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಜರುಗಿದೆ.

ಲಾಯರ್ ಅನಿತಾ ಕುಲಕರ್ಣಿ ಎಂಬುವರ ಪತಿ ಲಗಮಣ್ಣಾ ಹೊಸೂರೆ 48 ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮೃತ ವ್ಯಕ್ತಿ ಮದ್ಯ ವ್ಯಸನಿಯಾಗಿದ್ದ ಕಳೆದ ಒಂದು ವಾರದಿಂದ ಮದ್ಯ ಕುಡಿಯದಂತೆ ವೈದ್ಯರು ಹೇಳಿದ್ದರು‌. ಇದರಿಂದ ಮಾನಸಿಕ ಸ್ಥಿತಿ ಕಳೆದುಕೊಂಡು ಕುಗ್ಗಿ ಹೋಗಿದ್ದ ಎನ್ನಲಾಗುತ್ತಿದೆ.

ತನ್ನ ಪತ್ನಿ ಅನಿತಾಳನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಲು ಹುಕ್ಕೇರಿ ನ್ಯಾಯಾಲಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಪತ್ನಿ ಅನಿತಾ ನ್ಯಾಯಾಲಯದ ಕಲಾಪದಲ್ಲಿ ಭಾಗವಹಿಸಿದ್ದನ್ನು ಗಮನಿಸಿ ನ್ಯಾಯಾಲಯದ ಪಕ್ಕದಲ್ಲಿರುವ ಇ ಗ್ರಂಥಾಲಯಕ್ಕೆ ತೆರಳಿ ಅಲ್ಲಿಯ ಒಂದು ಕೋಣೆಯಲ್ಲಿದ್ದ ಮೈಕ್ ವಾಯರನಿಂದ ಕುತ್ತಿಗೆ ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡು ಅಸ್ವಾಭಾವಿಕ ಮರಣ ಹೊಂದಿದ್ದಾನೆ.

ಸ್ಥಳಕ್ಕೆ ಹುಕ್ಕೇರಿ ಪಿ ಎಸ್ ಆಯ್ ಅಭಿಜಿತ ಅಕ್ಕತಂಗೆರಹಾಳ ಆಗಮಿಸಿ ಪ್ರಕರಣ ಧಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.