ಉ.ಕ ಸುದ್ದಿಜಾಲ ಕಾಗವಾಡ :
ಕಬ್ಬು ತುಂಬಿದ ಟ್ರ್ಯಾಕ್ಟರ ಟ್ರ್ಯಾಲಿ ಪಲ್ಟಿ ಮೂವರು ಸ್ಥಳದಲ್ಲಿಯೇ ಸಾವು ಓರ್ವ ಸ್ಥಿತಿ ಗಂಭೀರ ಶೇಡಬಾಳ ಗ್ರಾಮದಿಂದ ಕೆಲಸಕ್ಕೆ ಹೊರಟ್ಟಿದ್ದ ನಾಲ್ಕು ಪಾದಚಾರಿಗಳ ಮೇಲೆ ಬಿದ್ದ ಟ್ರ್ಯಾಕ್ಟರ ಟ್ರ್ಯಾಲಿ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಬಳಿ ಈ ದುರ್ಘಟನೆ ನಡೆದಿದೆ. ಕಬ್ಬು ತುಂಬಿದ ಟ್ರ್ಯಾಕ್ಟರ ಟ್ರ್ಯಾಲಿಯ ಎಕ್ಸಲ್ ಬಿಚ್ವಿದ ಪರಿಣಾಮ ಟ್ರ್ಯಾಲಿ ಪಲ್ಟಿಯಾಗಿದೆ.
ಶೇಡಬಾಳದಿಂದ ಉಗಾರ ಕಡೆಗೆ ಹೊರಟ್ಟಿದ್ದ ಟ್ರ್ಯಾಕ್ಟರ ಟ್ರ್ಯಾಲಿ, ಆರು ಜನ ಕೆಲಸಕ್ಕೆ ಅಂತಾ ಹೊರಟಿರುವ ವೇಳೆ ಈ ಘಟನೆ ನಡೆದಿದೆ ಟ್ರ್ಯಾಲಿ ಪಲ್ಟಿಯಾದ ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಇನ್ನೊಬ್ಬರ ಸ್ಥಿತಿ ಗಂಭೀರ, ಪಕ್ಕದ ಮಹಾರಾಷ್ಟ್ರದ ಮಿರಜ್ ಸಿವಿಲ್ ಆಸ್ಪತ್ರೆಗೆ ದಾಖಲು
ಶೇಡಬಾಳದ ನಿವಾಸಿಗಳಾದ ಚಂಪಾ ಲಕ್ಕಪ್ಪ ತಳಕ್ಕಟಿ (45), ಭಾರತಿ ವಡ್ಡಾಳೆ (30), ಮಾಲು ರಾವಸಾಬ ಐನಾಪೂರ (55) ಸ್ಥಳದಲ್ಲಿಯೇ ಸಾವು. ಶೇಕವ್ವ ನರಸಪ್ಪ ಸರಸಾಯಿ (38) ಸ್ಥಿತಿ ಗಂಭೀರ ಪಕ್ಕದ ಮಹಾರಾಷ್ಟ್ರದ ಮಿರಜ ಸಿವಿಲ್ ಆಸ್ಪತ್ರೆಯಲ್ಲಿ ದಾಖಲು
ಸ್ಥಳಕ್ಕೆ ಕಾಗವಾಡ ಶಾಸಕ ರಾಜು ಕಾಗೆ ಹಾಗೂ ಮಾಜಿ ಸಚಿವ ವೀರಕುಮಾರ ಪಾಟೀಲ ಬೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಸ್ಥಳಕ್ಕೆ ಕಾಗವಾಡ ಪೋಲಿಸರು ಬೇಟಿ ನೀಡಿ ಪರಶೀಲನೆ ನಡೆಸಿದ್ದು ಈ ಕುರಿತು ಕಾಗವಾಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.