ಉ.ಕ ಸುದ್ದಿಜಾಲ ಮೋಳೆ :

ಒಬ್ಬ ವ್ಯಕ್ತಿ ಉದ್ಯೋಗ, ಹೈನುಗಾರಿಕೆ ಕೃಷಿ ಚಟುವಟಿಕೆ ವ್ಯಾಪಾರ ಹೀಗೆ ಇನ್ನಿತರ ಸ್ವಯಂ ಉದ್ಯೋಗ ಮಾಡಲು ಸಾಲ ಅತ್ಯವಶ್ಯಕ ಎಷ್ಟೋ ಮನೆಗೆ ಈ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಅನಕೂಲವಾಗಿದೆ. ಸರ್ವಾಂಗೀಣ ಅಭಿವೃದ್ಧಿಗಾಗಿ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯನ್ನ ವಿರೇಂದ್ರ ಹೆಗಡೆಯವರು ಪ್ರಾರಂಭ ಮಾಡಿದ್ದು ಶಾಘನೀಯ ಎಂದು ಕೌಲಗುಡ್ಡ ಸಿದ್ದಾಶ್ರಮದ ಸ್ವಾಮೀಜಿ ಅಮರೇಶ್ವರ ಮಹರಾಜರು ಹೇಳಿದರು.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ಬಿಸಿ ಟ್ರಸ್ಟ ವತಿಯಿಂದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಮತ್ತು ಉಡಿ ತುಂಬುವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ಸಮಾಜದ ಎಲ್ಲ ವರ್ಗದ ಜನರಿಗೆ ಸಹಾಯ ನೀಡುತ್ತ ಗ್ರಾಮಗಳ ಅಭಿವೃದ್ಧಿಗೆ ಪಣ ತೊಟ್ಟಿರುವ ಡಾ.ವಿರೇಂದ್ರ ಹೆಗಡೆ ಅವರ ಮಾರ್ಗ ದರ್ಶನದಲ್ಲಿ ಗ್ರಾಮೀಣ ಭಾಗದ ಬಡವರ ಹಾಗೂ ನೊಂದ ಕುಟುಂಬಗಳ ಆಶಾಕಿರಣವಾಗಿ ಧರ್ಮಸ್ಥಳ ಸಂಸ್ಥೆ ಹೊರಹೊಮ್ಮುತ್ತಿದೆ ಈ ಸಂಸ್ಥೆಯ ಜನ ಸೇವೆ ಕಾರ್ಯ ಹೀಗೆ ಮುಂದುವರೆಯಲಿ ಎಂದು ಹೇಳಿದರು.

ಪಶು ವೈದ್ಯ ಮಲ್ಲಿಕಾರ್ಜುನ ಹುಂಡೇಕರ ಮಾತನಾಡಿ ಧರ್ಮಸ್ಥಳ ಸಂಘದ ಸಾಲವನ್ನ ಎಲ್ಲರು ಸದುಪಯೋಗ ಪಡೆದುಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಗೆ ತನ್ನದೆಯಾದ ಆದ್ಯತೆ ಇದೆ ಹೀಗಾಗಿ ಎಲ್ಲರು ಸಾಲವನ್ನ ಸದುಪಯೋಗ ಪಡೆದುಕೊಂಡು ಹಸು ಸಾಕಾಣಿಕೆ‌ ಮಾಡಿ‌ ಆದಾಯ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ಸದ್ಯ ಭೂಮಿ ಫಲವತತ್ತೆ ಸಂಪೂರ್ಣ ಹಾಳಾಗಿದೆ ಜಾನುವಾರುಗಳ ಸಾಕಾಣಿಕೆ ಪ್ರಮಾಣ ಹೆಚ್ಚಾಗಬೇಕಿದೆ. ಸದ್ಯ ಹಸುವಿನ ಹಾಲು ತಿನ್ನುವುದು ಕಡಿಮೆಯಾಗಿದೆ. ಕೇವಲ ಚಹಾ ಮಾಡಲು ಹಾಲು ಉಪಯೊಗ ಮಾಡುತ್ತಿದ್ದಾರೆ. ಡಬ್ಲೂಎಚ್‌ಒ ಪ್ರಕಾರ ಒಬ್ಬ ಮನುಷ್ಯ ಪ್ರತಿದಿನ ಅರ್ಧ ಲೀಟರ ಹಾಲು ಸೇವನೆ ಮಾಡಬೇಕು. ಕೆಲವೊಂದಿಷ್ಟ ಜನರು ಹಳೆ ಪದ್ದತಿ ಮರತಿದ್ದಾರೆ ಹೀಗಾಗಿ ರೋಗ ರುಜನೆಗಳು ಬರುತ್ತಿವೆ. ಅದಕ್ಕಾಗಿ ಹೈನು ಉತ್ಪನ್ನಗಳನ್ನ ಸೇವಿಸಿ ರೋಗದಿಂದ ದೂರವಿರಿ ಆರೋಗ್ಯವನ್ನು ಕಡೆ ಗಮನ ಇರಲಿ ಎಂದರು.

ಬಾಹುಬಲಿ ಟೋಪಗಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಧರ್ಮಸ್ಥಳ ಸಂಘದಿಂದ ಹಲವಾರು ಮನೆಗಳು ನಡೆದಿವೆ. ಆದರೆ ಕೆಲವರು ಈ ಗ್ರಾಮೀಣ ಭಾಗದ ಸಾಲ ಪಡೆದು ಅದರ ಉಪಯೋಗಕ್ಕಿಂತ ದುರಪಯೋಗ ಹೆಚ್ವಾಗಿ ಮಾಡಿಕೊಳ್ಳುತ್ತಿದ್ದು ಸಾಲ ದುರಪಯೋಗ ಮಾಡಿಕೊಳ್ಳದ ಸದ್ಬಳಕೆ ಮಾಡಿಕೊಳ್ಳಿರಿ‌ ಎಂದು ಮನವಿ‌ ಮಾಡಿದರು.

ಈ ವೇಳೆ ಗ್ರಾಪಂ. ಅಧ್ಯಕ್ಷೆ ರೂಪಾ ಕಾಂಬಳೆ, ಧರ್ಮಸ್ಥಳ ಸಂಘದ ಜಿಲ್ಲಾ ನಿರ್ದೇಶಕಿ ನಾಗರತ್ನ ಹೆಗಡೆ, ಗ್ರಾನದ ಮುಖಂಡರಾದ ಹಣಮಂತ ಹುಗ್ಗಿ, ಮಹಾದೇವ ಐನಾಪೂರೆ, ಬಾಹುಬಲಿ ಟೋಪಗಿ ವಿಠ್ಠಲ ಹಳ್ಳೋಳ್ಳಿ, ಬಸವರಾಜ ತೇಲಿ,ಡಿ ಎಸ್ ಸಾವಂತ, ಸಂಜೀವ ಮರಾಠಿ ಅನೇಕರು ಇದ್ದರು