ಉ.ಕ ಸುದ್ದಿಜಾಲ ಅಥಣಿ :

ಬಾಲಕನನ್ನು ಕಚ್ಚಿಕೊಂದ ಹಾವನ್ನು ಮೂರು ದಿನದ ಬಳಿಕ ಸೆರೆ ಹಿಡಿದು ಕುಟುಂಬಸ್ಥರು ಹಾವನ್ನು ಸುರಕ್ಷಿತ ಸ್ಥಳಕ್ಕೆ ಬಿಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಕಮರಿ ಗ್ರಾಮದಲ್ಲಿ ಕಳೆದ ಮೇ ತಿಂಗಳ 31 ರಂದು ಅಮೀತ ಗುರುಲಿಂಗ ಸಿಂಧೂರ (10) ಮಧ್ಯಾಹ್ನ ಹಾವು ಕಚ್ಚಿ ಮೃತಪಟ್ಟಿದ್ದ. ಬಾಲಕನನ್ನು ಕಳೆದುಕೊಂಡ ಕುಟುಂಬದವರು ಹಾವನ್ನು ಹುಡುಕಿ ಅದನ್ನು ಹೊಡೆದು ಸಾಯಿಸದೆ ರಕ್ಷಿಸಿ ಅರಣ್ಯ ಪ್ರದೇಶದಲ್ಲಿ ಬಿಟ್ಟು ಉದಾರತೆ ಮೆರೆದಿದ್ದಾರೆ.

ಘಟನೆ ಹಿನ್ನೆಲೆ : ಮೇ 31ರಮಧ್ಯಾಹ್ನ ಮನೆಯಲ್ಲಿ ಮೊಬೈಲ್ ನೊಡುತ್ತಾ ಮಲಗಿದ್ದ ಅಮೀತ ನಿದ್ದೆಗೆ ಜಾರಿದ್ದ. ಮನೆ ಒಳಗೆ ಬಂದ ಹಾವು ಬಾಲಕನ ಕೈಗೆ ಕಚ್ಚಿತ್ತು. ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದ.

ಹಾವು ಮಾತ್ರ ಅದೇ ಸ್ಥಳದಲ್ಲಿ ಮನೆಯ ಪರಸಿ ಕೆಳಗೆ ಅವಿತಿತ್ತು. ಮೂರು ದಿನಗಳಿಂದ ಆ ಹಾವು ಒಂದೇ ಸ್ಥಳದಲ್ಲಿ ಇರುವುದರಿಂದ ಗಮನಿಸಿದ ಬಾಲಕನ ಕುಟುಂಬಸ್ಥರು ವಿಧಿ ವಿಧಾನಗಳನ್ನು ಮುಗಿಸಿ ಉರಗ ರಕ್ಷಕರಿಂದ ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು.