ಉ.ಕ ಸುದ್ದಿಜಾಲ ಹುಕ್ಕೇರಿ :
ಅಂತರರಾಜ್ಯ ಕಳ್ಳನೋರ್ವನನ್ನು ಬಂಧಿಸಿರುವ ಸಂಕೇಶ್ವರ ಪೊಲೀಸರು ಬಂಧಿತನಿಂದ 14.71 ಲಕ್ಷ ಮೌಲ್ಯದ 101 ವಿವಿಧ ಕಂಪನಿಯ ಮೊಬೈಲ್ ಹಾಗೂ ಒಂದು ಕಾರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಖದೀಮನನ್ನು ತೆಲಂಗಾಣ ರಾಜ್ಯದ ನಿಜಾಮಾಬಾದ ಜಿಲ್ಲೆಯ ಬಾಣಸವಾಡದ ನವೀನ ಸಂಪತ ಎಂಬುವ ಈ ಮೊಬೈಲ್ ಕಳ್ಳತನ ಪ್ರಕರಣ ದಲ್ಲಿ ಬಂಧಿತ ವ್ಯಕ್ತಿಯಾಗಿದ್ದಾನೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪೋಲಿಸರು ಹಿರಣ್ಯಕೇಶಿ ಕಾರಖಾನೆ ಬಳಿಯಲ್ಲಿ ವಾಹನಗಳ ತಪಾಸನೆ ಮಾಡುವ ಸಂದರ್ಭದಲ್ಲಿ ಈ ಖದೀಮ ತೆಗೆದುಕೊಂಡು ಹೋಗುತ್ತಿದ್ದ ಕಾರಿನಲ್ಲಿ ವಿವಿಧ ಕಂಪನಿಯ ಮೊಬೈಲ್ ಗಳು ಪತ್ತೆಯಾಗಿವೆ.
ಬಳಿಕ ಬಂಧಿನನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದಾಗ ಬಂಧಿತನ ಬಳಿ ಇದ್ದ 11.71 ಲಕ್ಷ ಮೌಲ್ಯದ 101 ಮೊಬೈಲ್ ಗಳು ಹಾಗೂ 3 ಲಕ್ಷ ಮೌಲ್ಯದ ಹುಂಡಾ ಕಂಪನಿಯ ಕಾರು ಪೊಲೀಸರು ವಶಕ್ಕೆ ಪಡೆದಿದ್ದಾರೆ.