ಉ.ಕ ಸುದ್ದಿಜಾಲ ವಿಜಯಪೂರ :
ಗೂರುಪೂರ್ಣಿಮೆ – 2014ರಲ್ಲಿ ವಿಲ್ ಮಾಡಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿ ದೇಹವನ್ನು ಭೂಮಿಯಲ್ಲಿಡುವ ಬದಲು ಅಗ್ಮಿ ಸ್ಪರ್ಶ ಮಾಡುವುದು ಶ್ರಾದ್ಧಿಕ ವಿಧಿ ವಿಧಾನ ಕರ್ಮಗಳು ಅನಗತ್ಯ ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸಬೇಕು ಯಾವುದೇ ಬಗೆಯ ಸ್ಮಾರಕ ನಿರ್ಮಾಣ ನಿರ್ಮಿಸಬಾರದು ಎಂದು ವಿಲ್ ನಲ್ಲಿ ಬರೆದಿದ್ದ ಸಿದ್ದೇಶ್ವರ ಸ್ವಾಮೀಜಿ.
ಈ ಬಗ್ಗೆ ಸುತ್ತೂರು ಮಠದ ಸ್ವಾಮೀಜಿ ಹೇಳಿಕೆ ಶಿಸ್ತಿನ ಮೂಲಕ ಸಾರ್ವಜನಿಕರು ಅಂತಿಮ ದರ್ಶನ ಪಡೆಯಬೇಕು. ಸುಮಾರು 50 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಜಿಲ್ಲೆಯ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಪ್ರಸಾದ ವ್ಯವಸ್ಥೆ. ದೂರ ದೂರ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲು ಅವಕಾಶ.
ತಮ್ಮ ಇಚ್ಛೆಗೆ ಅನುಸಾರವಾಗಿ ವಿಜಯಪುರ ಜನ ಪ್ರಸಾದ ಮಾಡಬಹುದು. ಅಗ್ನಿ ಸ್ಪರ್ಶ ಮಾಡಲು ನಿರ್ಧಾರ. ಅವರ ಗುರುಗಳ ಇಚ್ಚೆ ಅದೇ ಆಗಿದೆ. ಸ್ಮಾರಕ ಮಾಡಬಾರದು, ಗುಡಿ ಕಟ್ಟಬಾರದು ಎಂದು ಅವರ ಇಚ್ಚೆ. ಅಲ್ಲಮ ಪ್ರಭುಗಳ ವಚನ ಪಾಲನೆಗೆ ಸ್ವಾಮೀಜಿ ಮಾಹಿತಿ.
ಶ್ರೀಗಳು ಬರೆದ ವಿಲ್ ನಲ್ಲಿರುವ ಇತರೆ ಅಂಶಗಳು
1) ಬದುಕು ಅನುಭವಗಳ ಪ್ರವಾಹ
2)ಅದರ ಸಿರಿವಂತಿಕೆಯು ವಿಶ್ಚ- ಚಿಂತನೆ ಹಾಗೂ ಸತ್ಯಶೋಧನೆಗಳಿಂದ ಅದರ ಸೌಂಧರ್ಯವು ರಾಗದ್ವೇಷರಹಿತವಾದ ಹಾಗೂ ಅಸೀಮಿತವಾದ ಸದ್ಬಾವ
3)ಅದನ್ನು ಸುಭಗ ಹಾಗೂ ಸಮೃದ್ಧಗೊಳಿಸುವುದೇ ಸಾಧನೆ
4)ಅಂತಹ ಜೀವನದ ಉಪಯುಕ್ತವಾದ ಅನುಭವಗಳನ್ನು ಆಸಕ್ಗರೊಂದಿಗೆ ಹಂಚಿಕೊಳ್ಳುವುದೇ ಧರ್ಮ
1)ನನ್ನದು ಆವೇಗವಿಲ್ಲದ, ಸಾವಧಾನದ ಸಾಮಾನ್ಯ ಬದುಕು
2)ಅದನ್ನು ರೂಪಿಸಿದವನು ಗುರುದೇವರು.ಅದನ್ನ ಹದಗೊಳಿಸಿದವರು ನಾಡಿನ ಪೂಜ್ಯರು.ಹಿತೈಷಿಗಳು,ಸಾಧಕರು
3)ನಾನು ಎಲ್ಲರಿಗೂ ಎಲ್ಲದ್ದಕ್ಕೂ ಉಪಕೃತ
4)ಬದುಕು ಮುಗಿಯುತ್ತದೆ.ದೀಪ ಆರಿದಂತೆ.ತೆರೆ ಅಡಗಿದಂತೆ, ಮೇಘ ಕರಗಿದಂತೆ
5)ಉಳಿಯುವುದು ಬರಿ ಬಯಲು, ಮಹಾಮೌನ, ಶೂನ್ಯ ಸತ್ಯ
6)ಹಲವು ದಶಕಗಳ ಕಾಲ ಈ ಅದ್ಬುತ ಜಗತ್ತಿನಲ್ಲಿ ಬದುಕಿದ್ದೇನೆ. ನೋಡಿ ತಿಳಿದು ಅನುಭವಿಸಿದ್ದೇನೆ.ನನ್ನ ಬದುಕು ಕೊನೆಗೊಳ್ಳುವ ಮುಂಚೆ ಅದನ್ನ ಕೃತಜ್ಞತೆಯಿಂದ ಸ್ಮರಿಸಬೇಕು. ಅದಕ್ಕಾಗಿಯೇ ಈ ಅಂತಿಮ ಅಭಿವಾದನ ಪತ್ರ