ಉ.ಕ ಸುದ್ದಿಜಾಲ ವಿಜಯಪುರ :
ವಿಜಯಪುರ ಸಿದ್ದೇಶ್ವರ ಶ್ರೀಗಳನ್ನ ಬೇಟಿ ಮಾಡಿದ ಬಿ ವೈ ವಿಜಯೇಂದ್ರ ಶ್ರೀಗಳ ಆರೋಗ್ಯ ಸುಧಾರಣೆ ಆಗ್ತಿದೆ. ಮತ್ತೆ ವೈದ್ಯರು ಭೇಟಿ ಆಗಿ ತೆರಳಿದ್ದಾರೆ. ಯಾವುದೇ ಆತಂಕ ಇಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡಬಾರದು. ಶ್ರೀಗಳ ಪ್ರವಚನ ಕೇಳಲು ಕಾತುರರಾಗಿದ್ದೇವೆ. ಕಿರಿಯ ಶ್ರೀಗಳು ಯಡಿಯೂರಪ್ಪ ಮಗ ಬಂದಿದ್ದಾರೆ ಎಂದಾಗ ಕಣ್ಣು ತೆರೆದು ಆಶೀರ್ವಾದ ಮಾಡಿದ್ದಾರೆ. ಯಡಿಯೂರಪ್ಪ ಅವರು ಶ್ರೀಗಳ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದವರು.
ಹಿಂದೆ ನನ್ನ ಭಾಷಣ ಕೇಳಲು ಅರ್ಧ ಗಂಟೆ ವಾಹನ ನಿಲ್ಲಿಸಿದ್ದರು, ಅದು ನನ್ನ ಭಾಗ್ಯ. ಆತಂಕ ಪಡುವ ವಿಚಾರ ಇಲ್ಲವೇ ಇಲ್ಲ ಎಲ್ಲವು ಒಳ್ಳೆಯದಾಗುತ್ತೆ ಎಂದು ಹೇಳಿದರು.