ಉ.ಕ ಸುದ್ದಿಜಾಲ ಮೋಳೆ :

ಹಳೆಯ ನೆನಪು ಮರಚಿ ಹಾಕಲು 1999-2000 ನೇ ಸಾಲಿನಲ್ಲಿ ಕಲಿತಂತ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಂದ ಗುರುವಂದನಾ ಸಮಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ‌ ಶಾಲೆಯಲ್ಲಿ ಗುರುಗಳಿಗೆ ಸತ್ಕಾರ ಮಾಡುವ ಮೂಲಕ ಸಮಾರಂಭ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

1999-2000 ನೇ ಸಾಲಿನಲ್ಲಿ ಕಲಿತ ಎಲ್ಲ ವಿದ್ಯಾರ್ಥಿಗಳು ಸೇರಿ ತಮ್ಮಗೆ ಪಾಠ ಕಲಿಸಿದ ಎಲ್ಲ ಶಿಕ್ಷಕರನ್ನು ಕರೆಸಿ ಸತ್ಕಾರ ಮಾಡಿ ಶಿಕ್ಷಕರು ನೀಡಿದ ಭೋದನೆಯನ್ನು ನೆನಪಿಸಿಕೊಳ್ಳುವ ಮೂಲಕ ಅತಿ ವಿಜೃಂಭಣೆಯಿಂದ ಸಮಾರಂಭವನ್ನು ಮಾಡಲಾಯಿತು.

ಇನ್ನು ಸಮಾರಂಭ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಪ್ರಾರಂಭಿಸಿದರು. ತಾವೂ ಶಿಕ್ಷಕರ ಜೊತೆಗೆ ಇದ್ದ ಬಾಂದವ್ಯ ಜೊತೆಗೆ ಶಿಕ್ಷಕರು ಹೇಳಿದ ಆಟ – ಪಾಠದ ಮೇಲಕೂ ಹಾಕಿದರು. ತಮ್ಮ ವೃತ್ತಿಯ ಜೊತೆಗೆ ತಮ್ಮ ಅಭಿಪ್ರಾಯವನ್ನು ಹಚ್ಚಿಕೊಂಡು ಹಳೆಯ ವಿದ್ಯಾರ್ಥಿಗಳು ತಮ್ಮಗೆ ಕಲಿಸಿದ ಎಲ್ಲ ಶಿಕ್ಷಕರಿಗೆ ಸತ್ಕಾರ ಮಾಡಿ ಗೌರವಿಸಿದರು.

ಗುರುವಂದನಾ ಕಾರ್ಯಕ್ರಮದಲ್ಲಿ 1999-2000 ನೇ ಸಾಲಿನಲ್ಲಿ ಕಲಿತ ಶಾಲೆಯ ಎಲ್ಲ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಬೇರೆ ಬೇರೆ ಜಿಲ್ಲೆಯ ಹಾಗೂ ರಾಜ್ಯಗಳಿಂದ ಕೆಲಸದಲ್ಲಿ ತೊಡಗಿದ್ದವರು ಇಂದು ಎಲ್ಪರು ಕೂಡಿ, ಈ ಕಾರ್ಯಕ್ರಮದಲ್ಲಿ ಪರಸ್ಪರ ಒಬ್ಬರಿಗೊಬ್ಬರು ಮಾತನಾಡಿಕೊಂಡು ಸುಖ ದುಃಖ ಹಚ್ಚಿಕೊಂಡು ಖುಷಿಪಟ್ಟರು.