ಉ.ಕ ಸುದ್ದಿಜಾಲ ಕಾಗವಾಡ :

ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಪ್ರಿಯಾಂಕ ಜಾರಕಿಹೋಳಿ ಪರವಾಗಿ ಪ್ರಚಾರ ಸಭೆಯಲ್ಲಿ ಕಾಗವಾಡ ಶಾಸಕ ರಾಜು ಕಾಗೆ ಪಿಎಂ ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರದ ಉಗಾರ ಪಟ್ಟಣದ ಹೊರ ವಲಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನ ಉದ್ದೇಶಿಸಿ ಕಾಗವಾಡ ಶಾಸಕ ರಾಜು ಕಾಗೆ ಭಾಷಣ ಮಾಡಿದರು. ಕೇಂದ್ರ ಸರ್ಕಾರ ಹಲವಾರು ಯೋಜನೆ ಜಾರಿ ತರತ್ತೇವಿ ಅಂತಾ ಘೋಷಣೆ ಮಾಡಿತ್ತು. ಆದರೆ ಈವೆರೆಗೂ ಆ ಯೋಜನೆಗಳು ಯಾರಿಗೂ ಬಡವರಿಗೆ ಸಿಕ್ಕಿಲ್ಲ.

ಚಿಕ್ಕೋಡಿಗೆ ಕಳೆದ ಬಾರಿ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಮೋದಿ ಬಂದಿದ್ದರು ಮೇ ಚೌಕಿದಾರ ಹೂ ತುಮ್ಮ ಬಿ ಚೌಕಿದಾರ ಬನ್ನೊಗೆ ಎಂದು ಹೇಳಿದರು. ಬಾಯಿ ಅವರ ಬೆಹೆನೊ ಎಂದು ಮೋದಿ ವಿರುದ್ದ ವಾಗ್ದಾಳಿ ನಡೆಸಿದ ಕಾಗವಾಡ ಶಾಸಕ ರಾಜು ಕಾಗೆ

ನಾವು ಯಾವುದೇ ಪರಸ್ಥಿತಿಯಲ್ಲಿ ಗೆಲ್ಲುವುದು ಸತ ಸಿದ್ದ ಕಾಗವಾಡ ಮತ್ತು ಅಥಣಿ ಮತಕ್ಷೇತ್ರದಿಂದ ಒಂದು ಲಕ್ಷ ಅಂತರದಿಂದ ಗೆಲ್ಲಿಸುತ್ತೇವೆ ಅಂತಾ ಮತ ಕೊಟ್ಟಿದ್ದೇವೆ. ಬಿಜೆಪಿ ಅವರ ಬಂದಾಗ ಬಿಜೆಪಿ ಕಡೆ ಕಾಂಗ್ರೆಸ್ ನವರ ಬಂದಾಗ ಕಾಂಗ್ರೆಸ್ ಕಡೆ, ಹೀಗೆ ಯಾವುದೇ ನಾಟಕ ನಡೆಯುವುದಿಲ್ಲ ಬಿಜಿಪಿ ವಿರುದ್ದ ವಾಗ್ದಾಳಿ ನಡೆಸಿದ ಕಾಗವಾಡ ಶಾಸಕ ರಾಜು ಕಾಗೆ.