ಉ.ಕ ಸುದ್ದಿಜಾ ನಿಪ್ಪಾಣಿ :

ಚಿಕ್ಕೋಡಿ ಲೋಕಸಭಾ ಅಖಾಡದಲ್ಲಿ ಸಚಿವ ಸತೀಶ ಜಾರಕಿಹೋಳಿ ಪುಲ್ ಆಕ್ಟಿವ್ ಮಗಳು ಪ್ರಿಯಂಕಾ ಜಾರಕಿಹೋಳಿ ಪರ ಅಬ್ಬರದ ಪ್ರಚಾರ ಶಾಸಕಿ ಶಶಿಕಲಾ ಜೊಲ್ಲೆ ಕ್ಷೇತ್ರದಲ್ಲಿ ಹೆಚ್ವಿನ ಮತ ಪಡೆಯಲು ಪ್ಲ್ಯಾನ ಮಾಡಿದ ಸಾಹುಕಾರ.

ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಕ್ಷೇತ್ರದಲ್ಲಿ ಆಕ್ಟೀವ ಆದ ಸತೀಶ ಜಾರಕಿಹೋಳಿ ಕಳೆದ ವಿಧಾನಸಭಾ ಕ್ಷೇತ್ರದಿಂದ ಎನ್‌ಸಿಪಿ ಇಂದ ಸ್ಪರ್ಧೆ ಮಾಡಿದ್ದ ಉತ್ತಮ ಪಾಟೀಲ ಬೇಟಿ ಮಾಡಿದ ಸತೀಶ ಜಾರಕಿಹೋಳಿ.

ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಮುಖಂಡ ಉತ್ತಮ ಪಾಟೀಲ್‌ ಕಾಂಗ್ರೆಸ್‌ ಪಕ್ಷದ ಪರ ಪ್ರಚಾರ ಮಾಡುತ್ತಾರೆ. ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಆದರೆ ಚಿಕ್ಕೋಡಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾಗೆ ಬೆಂಬಲ ನೀಡಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.

ನಿಪ್ಪಾಣಿ ತಾಲೂಕಿನ ಬೋರಗಾಂವ್ ಪಟ್ಟಣದ ಹಿರಿಯ ಸಹಕಾರಿ ಧುರಿಣರಾದ ರಾವಸಾಹೇಬ ಪಾಟೀಲ್ ಅವರ ಮನೆಗೆ ಭೇಟಿ ನೀಡಿ ಕುಶಲೋಪರಿ ವಿಚಾರಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉತ್ತಮ ಪಾಟೀಲ್ ಅವರು ಕಾಂಗ್ರೆಸ್ ಪಕ್ಷದ ಒಂದು ಭಾಗ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅನಿವಾರ್ಯ ಕಾರಣಗಳಿಂದ ಅವರು ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧೆ ಮಾಡಿದ್ದರು. ಅವರ ಜತೆಗೆ ಇಂದು ಮಾತುಕತೆಯಾಗಿದೆ. ಕಾಂಗ್ರೆಸ್ ಪಕ್ಷದ ಪರ ಅವರು ಪ್ರಚಾರ ಮಾಡುತ್ತಾರೆ ಎಂದರು.

ರಮೇಶ ಜಾರಕಿಹೋಳಿ ಆಪ್ತ ಜೈನ ಸಮಾಜದ ಮುಖಂಡರಾಗಿರುವ ಉತ್ತಮ ಪಾಟೀಲ ಹಾಗೂ ತಂದೆ ರಾವಸಾಬ ಪಾಟೀಲ ಬೇಟಿ ಇನ್ನೆರಡು ದಿನಗಳಲ್ಲಿ ಕಾಂಗ್ರೆಸ್ ಸೇರಲಿರುವ ಉತ್ತಮ ಪಾಟೀಲ‌.