ಉ‌.ಕ ಸುದ್ದಿಜಾಲ ಚಿಕ್ಕೋಡಿ :

ಅಕ್ಕನೊಂದಿಗೆ ಸೇರಿಕೊಂಡು ಮಾವನ ಕೊಲೆ ಮಾಡಿದ ಆರೋಪಿಗಳಿಗೆ ಚಿಕ್ಕೋಡಿಯ 7ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ತಾರಕೇಶ್ವರಗೌಡ ಪಾಟೀಲ ಅವರು ಜೀವಾವಧಿ ಶಿಕ್ಷೆ ಹಾಗೂ 1.40 ಲಕ್ಷ ರೂ.ಗಳ ದಂಡ ವಿಧಿಸಿ ಆದೇಶ ನೀಡಿದ್ದಾರೆ.

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕರವೀರ ತಾಲೂಕಿನ ನೇರಲಿ ಗ್ರಾಮದ ಸಚಿನ ಬೋಪಳೆ ಎಂಬಾತನನ್ನು 2020ರ ಸೆ.3ರಂದು ನಿಪ್ಪಾಣಿ ತಾಲೂಕಿನ ಹಂಚಿನಾಳ ಕೆ.ಎಸ್. ಗ್ರಾಮದಲ್ಲಿ ಕೊಲೆ ಮಾಡಿದ್ದರು. ಈತ ತನ್ನ ಪತ್ನಿ ಅನಿತಾಳ ಮೇಲೆ ಸಂಶಯ ಪಡುತ್ತಿದ್ದ ಎನ್ನಲಾಗುತ್ತಿದೆ.

ಇಬ್ಬರಿಗೆ ಬುದ್ದಿ ಹೇಳಲು ಕರೆಯಿಸಿದಾಗ ಮಾತಿಗೆ ಮಾತು ಬೆಳೆದು ಆರೋಪಿಗಳು ಕೊಲೆ ಮಾಡಿದ್ದಾರೆ. ನಂತರ ಜೆಸಿಬಿಯಿಂದ ಗುಂಡಿ ಅಗೆದು ಶವ ಮುಚ್ಚಲು ಯತ್ನಿಸುತ್ತಿರುವಾಗ ಜೆಸಿಬಿ ಚಾಲಕ ಸುನೀಲ ರಾಥೋಡ ಶವ ನೋಡಿರುತ್ತಾನೆ.

ನೀನು ವಿಷಯ ಯಾರಿಗಾದರೂ ಹೇಳಿದರೆ ನಿನಗೂ ಅದೇ ರೀತಿ ಮಾಡುವುದಾಗಿ ಕೃಷ್ಣಾ ಉರ್ಪ ಪಿಂಟೂ ರಾಜಾರಾಮ ಘಾಟಗೆ ಧಮಕಿ ಹಾಕಿದ್ದ. ನಂತರ ಸುನೀಲ ರಾಥೋಡ ದೂರು ನೀಡಿದ ಬಳಕೆಗೆ ಬಂದಿದೆ.

ಹಿನ್ನೆಲೆಯಲ್ಲಿ ಈ ಪ್ರಕರಣ ಆರೋಪಿಗಳಾದ ಹಂಚಿನಾಳ ಕೆ.ಎಸ್.ಗ್ರಾಮದ ಕೃಷ್ಣಾತ ಉರ್ಪ ಪಿಂಟೂ ಘಾಟಗೆ(32) ಹಾಗೂ ಕೊಲ್ಲಾಪುರ ಜಿಲ್ಲೆಯ ಕರವೀರ ತಾಲೂಕಿನ ನೇರಲಿ ಗ್ರಾಮದ ಮೃತನ ಪತ್ನಿ ಅನಿತಾ ಸಚಿನ ಬೋಪಲೆ(35), ಕೊಲ್ಲಾಪುರ ಜಿಲ್ಲೆಯ ಕಾಗಲ ತಾಲೂಕಿನ ಸಿದ್ದ ನೇರಲಿ ಗ್ರಾಮದ ವನಿತಾ ಕೃಷ್ಣಾತ ಚವ್ಹಾಣ(29), ನಿಪ್ಪಾಣಿ ತಾಲೂಕಿನ ಹುನ್ನರಗಿ ಗ್ರಾಮದ ಗಣೇಶ ಅಣ್ಣಾಪ್ಪಾ ರೇಡೆಕರ(21) ಎಂಬವರಿಗೆ ನ್ಯಾಯಾಧೀಶರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.