ಉ.ಕ ಸುದ್ದಿಜಾಲ ಅಥಣಿ :

ಅಥಣಿ ಪಟ್ಟಣದ ಬಿಜೆಪಿ ಸಮಾವೇಶದಲ್ಲಿ ಮಾಜಿ ಸಚಿವ ರಮೇಶ್ ಭಾಷಣ.ನಾವು ಹೆಚ್ಚು ಮಾತನಾಡುವುದಿಲ್ಲ, ವಿರೋಧಿಗಳು ಸುಳ್ಳು ಹಬ್ಬಿಸುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸೋತ ಮನೆಯಲ್ಲಿ ಕುಳಿತಿದ್ದವರು. ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು ಬಿಜೆಪಿಯನ್ನ ನಾವು ಸೇರಿಲ್ಲ. ಹದಿನಾಲ್ಕು ತಿಂಗಳು ಹೋರಾಡಿ ಯಡಿಯೂರಪ್ಪನವರನ್ನ ಮುಖ್ಯಮಂತ್ರಿ ಮಾಡಿದೇವು. ಅನರ್ಹ ಆದೇವು, ನಂತರ ಮತ್ತೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆದ್ದು ಮಂತ್ರಿಯಾದೇವು ಎಂದು ರಮೇಶ ಜಾರಕಿಹೊಳಿ ಮಾತನಾಡಿದರು

ಬೆಳಗಾವಿ ಜಿಲ್ಲೆಯ ಭೋಜರಾಜ ಕ್ರೀಡಾಂಗಣದಲ್ಲಿ ಅಯೋಜಿಸಿದ ಬಿಜೆಪಿ ಸಮಾವೇಶ ಸಭೆಯಲ್ಲಿ ಮಾತನಾಡಿದ ರಮೇಶ 2023ರಲ್ಲಿ ಮತ್ತೆ ಟಿಕೆಟ್ ಕೊಡುವುದಾಗಿ ಹೈಕಮಾಂಡ್ ಮಾತುಕೊಟ್ಟಿದ್ರೂ. ಈಗಿನ ಕಾಂಗ್ರೆಸ್ ಕ್ಯಾಂಡಿಡೇಟ್ ಅನ್ಯಾಯ ಆಗಿದೆ ಅಂತಿದ್ದಾರೆ. ನಿಜವಾಗಿಯೂ ಅನ್ಯಾಯ ಆಗಿದ್ದು ಮಹೇಶ್ ಕುಮಟಳ್ಳಿಗೆ.

ಸೋತ ಮನುಷ್ಯನಿಗೆ ಮಂತ್ರಿ ಮಾಡಿ ಡಿಸಿಎಂ ಮಾಡಿದ್ರೂ. ಅಂತಾ ಮನುಷ್ಯ ಇಂದು ಬಿಜೆಪಿ ವಿರುದ್ಧ ಮಾತಾಡ್ತಿದ್ದಾರೆ. ಅಂತಹ ಮನುಷ್ಯನಿಗೆ ಮಹೇಶ್ ಕುಮಟಳ್ಳಿಗೆ ವೋಟ್ ಹಾಕಿ ಬುದ್ದಿ ಕಲಿಸಬೇಕು. 2023ರಲ್ಲಿ ಬಿಜೆಪಿ ಬಹುಮತದೊಂದಿಗೆ ಗೆದ್ದು ಸರ್ಕಾರ ರಚನೆ ಮಾಡುತ್ತೆ.

ಸರ್ಕಾರ ಬಂದ ಕೂಡಲೇ ಹಳ್ಯಾಳ ಕೃಷ್ಣಾ ಶುಗರ್ ಫ್ಯಾಕ್ಟರಿ ಅವ್ಯವಹಾರ ಸಿಬಿಐಗೆ ಕೊಡುವುದು. ಚುನಾವಣೆ ಮುಗಿದ ತಕ್ಷಣ ಕೃಷ್ಣಾ ಸಕ್ಕರೆ ಕಾರ್ಖಾನೆ ಅವ್ಯವಹಾರ ಸಿಬಿಐ ಕೊಡಬೇಕು ಮತ್ತು ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಆಗಬೇಕು. ಅಥಣಿ ಜನರ ಪರವಾಗಿ ಇಂದು ಅಮಿತ್ ಶಾ ಅವರಿಗೆ ಮನವಿ ಮಾಡ್ತೇವಿ. ಹತಾಶೆ ಭಾವನೆಯಿಂದ ನಮ್ಮ ಬಗ್ಗೆ ಸುಳ್ಳು ಪ್ರಚಾರ ಮಾಡ್ತಿದ್ದಾರೆ.

ಗೋಕಾಕ್ ದಿಂದ ಬಂದು ರಾಜಕಾರಣ ಮಾಡ್ತಿದ್ದಾರೆ ಅಂತಾರೆ. ಸುಳ್ಳು ಪ್ರಚಾರ ತಗೊಂಡು ನಾನು ರಾಜಕೀಯಕ್ಕೆ ಬಂದಿಲ್ಲ. ಸವದಿ ವಿರುದ್ಧದ ಆರೋಪ ಸುಳ್ಳಾದ್ರೇ ರಾಜಕೀಯ ನಿವೃತ್ತಿಯಾಗುತ್ತೇನೆ ಎಂದ ರಮೇಶ್. ಮಹೇಶ್ ಕುಮಟಳ್ಳಿ, ಶ್ರೀಮಂತ್ ಪಾಟೀಲ್‌ರನ್ನ ಗೆಲ್ಲಿಸಿಕೊಡಬೇಕೆಂದು ಮನವಿ ಮಾಡಿದ ರಮೇಶ ಜಾರಕಿಹೋಳಿ.