ಉ.ಕ ಸುದ್ದಿಜಾಲ ಕಾಗವಾಡ :
ಪಂಚಮಸಾಲಿ 2ಎ ಮೀಸಲಾತಿ ಗೋಸ್ಕರ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲು ಶತಸಿದ್ಧ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ ಕಾಗವಾಡ ಶಾಸಕ ರಾಜು ಕಾಗೆ ಅಧಿಕಾರಕ್ಕಿಂತ ಸಮಾಜ ಮುಖ್ಯ ಎಂದ ಕಾಂಗ್ರೆಸ್ ಶಾಸಕ.
ಬೆಳಗಾವಿ ಜಿಲ್ಲೆಯ ಕಾಗವಾಡದಲ್ಲಿ ಶಾಸಕ ರಾಜು ಕಾಗೆ ಹೇಳಿಕೆ ನೀಡಿದ್ದು ನನಗೆ ಸಮಾಜಕಿಂತ ಅಧಿಕಾರ ಮುಖ್ಯವಲ್ಲ. ಎಲ್ಲ ಪಂಚಮಸಾಲಿ ಸಮಾಜದ ಶಾಸಕರು ರಾಜೀನಾಮೆ ನೀಡುವ ಮುಂದಾದ್ರೆ ಮೀಸಲಾತಿ ಸಿಕ್ಕೆ ಸಿಗುತ್ತೆ. ಪಂಚಮಸಾಲಿ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಯ ಮುಂದೆ ಕಾಂಗ್ರೆಸ್ ಶಾಸಕ ರಾಜು ಕಾಗೆ ಹೇಳಿಕೆ ನೀಡಿದ್ದಾರೆ.
ಪಂಚಮಸಾಲಿ ಹೋರಾಟದಿಂದ ಕೆಲವರು ದೂರ ಉಳಿದಿದ್ದಾರೆ. ನಾವು ಕೇವಲ ಆಗ್ರಹ ಮಾಡಿದರೆ ಇದರಿಂದ ಯಾವುದೇ ಲಾಭವಿಲ್ಲ. ನಾಳೆಯೆ ಎಲ್ಲಾ ಪಂಚಮಸಾಲಿ ಶಾಸಕರು ರಾಜೀನಾಮೆ ನೀಡಿದರೆ ಸಮುದಾಯಕ್ಕೆ ಮೀಸಲಾತಿ ಕೊಟ್ಟೇ ಕೊಡುತ್ತಾರೆ ಎಂದು ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆ ಅಭಿಪ್ರಾಯಪಟ್ಟರು.
ಇತಿಹಾಸದಲ್ಲಿ ನಮ್ಮ ಹೆಸರು ಉಳಿಯಬೇಕಾದರೆ ನಾವು ಸಮುದಾಯಕ್ಕಾಗಿ ರಾಜೀನಾಮೆ ನೀಡೋಣ ಎಂದು ಪಂಚಮಸಾಲಿ ಶಾಸಕರಿಗೆ ಕಾಗೆ ವಿನಂತಿ ಮಾಡಿದರು. ನಾನು ಒಬ್ಬ ಪಂಚಮಸಾಲಿ ಹೋರಾಟದಲ್ಲಿ ಭಾಗವಹಿಸಲಿಲ್ಲ ಎಂದರೆ ಏನಾಗುತ್ತದೆ ಎಂಬ ಅಭಿಪ್ರಾಯ ಕೆಲ ಶಾಸಕರಲ್ಲಿದೆ. ಆದರೆ ಸಮುದಾಯದ ಎಲ್ಲಾ ಶಾಸಕರು ಒಟ್ಟುಗೂಡಿ ರಾಜೀನಾಮೆ ನೀಡಿದರೆ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗುತ್ತದೆ ಎಂದರು.
ರಾಜ್ಯದಿಂದ ಮೀಸಲಾತಿ ಕುರಿತು ಕೇಂದ್ರಕ್ಕೆ ಮನವಿ ಮಾಡಲಿ. ಅಲ್ಲಿ ನಮ್ಮ ಸಂಸದರಿದ್ದಾರೆ. ಒಟ್ಟಿನಲ್ಲಿ ಸಮುದಾಯಕ್ಕೆ ನ್ಯಾಯ ಸಿಗುವುದಾದರೆ ನಾನು ರಾಜೀನಾಮೆ ನೀಡಲು ಸಿದ್ಧ ಎಂದು ಅಭಿಪ್ರಾಯಪಟ್ಟರು.