ಉ.ಕ ಸುದ್ದಿಜಾಲ ನಿಪ್ಪಾಣಿ :
ನಿಪ್ಪಾಣಿಯಲ್ಲಿ ಪಂಚಮಸಾಲಿ ಸಮುದಾಯದ ಹೋರಾಟ. ಹೋರಾಟದಲ್ಲಿ ಗೈರಾದವರಿಗೆ ಪರೋಕ್ಷವಾಗಿ ಕುಟುಕಿದ ಶಾಸಕ ವಿನಯ್ ಕುಲಕರ್ಣಿ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟದ ಬಳಿಕ ಮಾತನಾಡಿದ ಅವರು, ಸಮಾಜದಿಂದ ಮತ ಪಡೆದು ಶಾಸಕರಾಗಿದ್ದಾರೆ. ಗೆದ್ದ ಬಳಿಕ ಶಾಸಕರಿಗೆ ಅರಿವು ಇರಬೇಕು. ಕೆಲವರು ಸೋತಿದ್ದಾರೆ ಕೆಲವರು ಗೆದ್ದಾರೆ. ಗೆದ್ದ ಶಾಸಕರಿಕೆ ಅರಿವು ಇರಬೇಕು ಎಂದರು.
ಸಮಾಜಕ್ಕೆ ಅನ್ಯಾಯವಾದಾಗ ಬರುವಂತದ್ದು ಕರ್ತವ್ಯ ಯಾವುದೇ ಸಮಾಜಕ್ಕೆ ಅನ್ಯಾಯದ್ರು ಶಾಸಕರು ಬರಬೇಕು ಅದು ನಮ್ಮ ಧರ್ಮ, ಬೆಂಬಲ ಸೂಚಿಸಬೇಕು. ಕಾರ್ಯಕ್ರಮಕ್ಕೆ ಗೈರಾದ ಶಾಸಕರ ವಿರುದ್ದ ಪರೋಕ್ಷವಾಗಿ ಕುಟುಕಿದ ವಿನಯ್ ಕುಲಕರ್ಣಿ.
ಪಂಚಮಸಾಲಿ ಸಮಾಜದಿಂದ ಗೆದ್ದ ಶಾಸಕರ ಗೈರು ಹಿನ್ನೆಲೆ ಹೆಸರು ಹೇಳದೆ ಕುಟುಕಿದ ಕುಲಕರ್ಣಿ ಈಗಾಗಲೇ ಮುಖ್ಯಮಂತ್ರಿ ಹಾಗೂ ದೆಹಲಿ ನಾಯಕರಿಗೆ ನಾನು ಗಮನಕ್ಕೆ ತಂದಿದ್ದೇವೆ. ಚುನಾವಣೆಯಲ್ಲಿ ಲಿಂಗಾಯತ ಸಮಾಜ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಕೈ ಹಿಡಿದಿದೆ. ಇದನ್ನ ನಮ್ಮ ಸರ್ಕಾರ ಅರಿವಿನಲ್ಲಿ ಇಟ್ಟುಕೊಂಡು ಸೆಂಟ್ರಲ್ ಒಬಿಸಿಗೆ ಪ್ರಸ್ತಾಪ ಕಳಿಸಬೇಕು.
ಕುರುಬ ಸಮುದಾಯವನ್ನ ಎಸ್.ಟಿ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಇಲ್ಲಿ 2A ಖಾಲಿಯಾದ್ರೆ ನಮ್ಮನ್ನ ಅಲ್ಲಿಗೆ ಸೇರಿಸಬೇಕು ಎಂದು ಒತ್ತಾಯಿಸಿದ್ದೇನೆ. ನೂರಕ್ಕೆ 90 ರಷ್ಟು ಜನ ಒಕ್ಕಲುತನ ಮಾಡಿಕೊಂಡು ಬದಕುತ್ತಿದ್ದಾರೆ. ಕೋಟಿ ಕೋಟಿ ಕೊಟ್ಟು ವಿಧ್ಯಾಭ್ಯಾಸ ಮಾಡಲಯ ಬಡವರಿಗೆ ಆಗುತ್ತಿಲ್ಲಾ. ಹಾಗಾಗಿ ನಮ್ಮನ್ನ ಸೆಂಟ್ರಲ್ ಒಬಿಸಿಗೆ ಸೇರಿಸಲೇಬೇಕು.
ಅಧಿವೇಶನ ಬಳಿಕ ಸ್ವಾಮೀಹಿಗಳನ್ನ ಕರೆದು ಸಭೆ ಮಾಡುವುದಾಗಿ ಸಿದ್ದಾರಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಯಿಸಿದ ಅವರು ಸ್ವಾಮೀಜಿಯವರನ್ನ ಕರೆದಿಲ್ಲಾ ಅದೆ ಕಾರಣಕ್ಕಾಗಿ ಇಂದು ನಿಪ್ಪಾಣಿಯಲ್ಲಿ ಹೋರಾಟ ಶುರು ಮಾಡಿದ್ದಾರೆ ನಾವು ಸಹ ಬಂದಿದ್ದೇವೆ.
ಸ್ವಾಮೀಜಿ ಅದೆ ಕಾರಣಕ್ಕಾಗಿ ಮತ್ತೆ ಹೋರಾಟ ನಡೆಸುತ್ತಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ನೊ ಎಂದ ವಿನಯ್ ಕುಲಕರ್ಣಿ ನಮಗೆ ಮೀಸಲಾತಿಗೆ ಸೇರಿಸಬೇಕು ಎಂದು ಹೊರಟ ವಿನಯ್ ಕುಲಕರ್ಣಿ