ಉ.ಕ ಸುದ್ದಿಜಾಲ ಬೆಳಗಾವಿ :

ಭೀಮಾ ತೀರದಲ್ಲಿ ನಿವೃತ್ತ ಶಿಕ್ಷಕನೋರ್ವನ ಬರ್ಬರ ಹತ್ಯೆ ನಡೆದಿತ್ತು.ಆದ್ರೆ ಕೊಲೆ ತನಿಖೆ ಕೈಗೊಂಡ ಪೊಲೀಸರಿಗೆ ಶಾಕ್ ಕಾದಿತ್ತು. ಹೆತ್ತ ಮಗಳೇ ಪ್ರಿಯಕರೊನೊಟ್ಟಿಗೆ ಸೇರಿ ತಂದೆಯನ್ನು ಬರ್ಬರವಾಗಿ ಕೊಂದು ಬೀಸಾಕಿದ್ಲು..ಇದೀಗ ನಿವೃತ್ತ ಶಿಕ್ಷಕನೋರ್ವನ ಕೊಲೆಗೆ ಟ್ವೀಸ್ಟ್ ಸಿಕ್ಕಿದೆ..

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚೌಡಿಹಾಳ್ ರಸ್ತೆಯ ಪೂಜಾರಿ ವಸ್ತಿ ತೋಟದ ಬಳಿ ನಿವೃತ್ತ ಶಿಕ್ಷಕ 62 ವರ್ಷದ ಸಿದ್ದಪ್ಪ ಅಂಜುಟಗಿ ಎಂಬಾತನ ಕೊಲೆ‌ ನಡೆದಿತ್ತು. ಈ ಕೊಲೆಗೆ ಈಗ ರೋಚಕ ತಿರುವು ಪಡೆದಿದೆ. ಆಸ್ತಿ ವಿವಾದ ಹಾಗೂ ಅಕ್ರಮ ಸಂಬಂಧದಿಂದಾಗಿ ಪುತ್ರಿ ಆಕೆಯೆ ಪ್ರಿಯಕರ ಹಾಗೂ ಆತನ ಸ್ನೇಹಿತ ಸೇರಿ ಕೊಲೆ ಮಾಡಿರೋದು ಬೆಳಕಿಗೆ ಬಂದಿದೆ.

ಚೌಡಿಹಾಳ ರಸ್ತೆಯಲ್ಲಿ ಸಿದ್ದಪ್ಪ ಮೃತ ದೇಹ ಪತ್ತೆಯಾಗಿತ್ತು. ಆರಂಭದಲ್ಲಿ ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿರಬಹುದು ಎಂದು ಅಂದಾಜಿಸಲಾಗಿತ್ತು. ಆದ್ರೆ ಮೃತ ಸಿದ್ದಪ್ಪ ಅವರ ಹಿರಿಯ ಮಗಳು ನಿಖಿತಾ ನೀಡಿದ ದೂರಿನ ತನಿಖೆ ನಡೆಸಿದಾಗ ಪುತ್ರಿಯೇ ಹತ್ಯೆ ಮಾಡಿದ್ದು ಬಯಲಾಗಿದೆ. ಈ ಸಂಬಂಧ ಸಿದ್ದಪ್ಪ ‌ಪುತ್ರಿ ಪ್ರಿಯಾಂಕಾ, ಆಕೆಯ ಪ್ರಿಯಕರ ಸಂತೋಷನನ್ನು ಬಂಧಿಸಲಾಗಿದ್ದು, ಮತ್ತೋರ್ವ ಆರೋಪಿಗಾಗಿ ಹುಡುಕಾಟ ನಡೆದಿದೆ.

ಕಳೆದ ಎರಡು ವರ್ಷಗಳ ‌ಹಿಂದೆ ಸಿದ್ದಪ್ಪ ನಿವೃತ್ತಿಯಾಗಿದ್ದರು. ಈ ವೇಳೆ ಅವರಿಗೆ ನಿವೃತ್ತಿ ಹಣ ಬಂದಿತ್ತು. ಇದರ ಜೊತೆಗೆ ಊರಲ್ಲಿ ಸ್ವಲ್ಪ ಆಸ್ತಿ ಇತ್ತು. ಈ ಆಸ್ತಿ ವಿಚಾರದಲ್ಲಿ ತಂದೆ ಮಗಳ ನಡುವೆ ಗಲಾಟೆ ನಡೆಯುತ್ತಿತ್ತು. ಇದರ ಜೊತೆಗೆ ಸಿದ್ದಪ್ಪ ಪುತ್ರಿ ಪ್ರಿಯಾಂಕಾ ಪತಿ ಸುರೇಶ ಮಸಳಿ ಕೊರೋನಾ ಅವಧಿಯಲ್ಲಿ ಮೃತಪಟ್ಟಿದ್ದರು. ಈ ವೇಳೆ ಕೆಲ ಕಾಲ ವಿಜಯಪುರದಲ್ಲಿ ವಾಸವಿದ್ದ ಪ್ರಿಯಾಂಕಾಗೆ ಆಟೋ ಚಾಲಕ ಸಂತೋಷ ಸಿಂಧೆ ಜೊತೆಗೆ ಅಕ್ರಮ ಸಂಬಂಧ ಬೆಳೆದಿತ್ತು. ಈ ವಿಚಾರದಲ್ಲಿ ಗಲಾಟೆಯಾಗಿ ಅಕ್ರಮ ಸಂಬಂಧಕ್ಕೆ ತಂದೆ ವಿರೋಧ ವ್ಯಕ್ತಪಡಿಸಿದ್ದ‌. ಜೊತೆಗೆ ಆಸ್ತಿಯಲ್ಲಿ ಪಾಲು ನೀಡೋದಿಲ್ಲ ಎಂದಿದ್ದ. ಇದು ಪ್ರಿಯಾಂಕಾಳ ಸಿಟ್ಟಿಗೆ ಕಾರಣವಾಗಿತ್ತು…

ಇನ್ನು ಆಸ್ತಿ ವಿಚಾರದಲ್ಲಿ ತಂದೆಯೊಂದಿಗೆ ಆಗಸ್ಟ್ 15 ರಂದು ಗಲಾಟೆ ಮಾಡಿದ್ದಾಳೆ. ಗಲಾಟೆ ವಿಕೋಪಕ್ಕೆ ಹೋಗಿದೆ. ಈ ವೇಳೆ ತನ್ನ ಪ್ರಿಯಕರ ಸಂತೋಷಗೆ ಮನೆಗೆ ಬರೋಕೆ ಹೇಳಿದ್ದಾಳೆ. ರಾತ್ರಿ ತನ್ನ ಸ್ನೇಹಿತನ ಜೊತೆ ಪ್ರಿಯಾಂಕಾ ಮನೆಗೆ ಹೋದ ಸಂತೋಷ ಹಾಗೂ ಆತನ ಸ್ನೇಹಿತ ಮೊದಲು ಸಿದ್ದಪ್ಪನನ್ನು ಉಸಿರುಗಟ್ಟಿಸಿ ಸಾಯಿಸಿದ್ದಾರೆ. ಬಳಿಕ ಕಾರ ಕುಟ್ಟುವ ದೊಡ್ಡ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ರಸ್ತೆ ಪಕ್ಕದಲ್ಲಿ ಬಿಸಾಕಿ ಪರಾರಿಯಾಗಿದ್ದಾರೆ…

ಸದ್ಯ ಮೂವರು ಆರೋಪಿಗಳ ಪೈಕಿ ಪ್ರಿಯಾಂಕಾ ಹಾಗೂ ಆಕೆಯ ಪ್ರಿಯಕರ ಸಂತೋಷ ಬಂಧನವಾಗಿದೆ. ಆತನ ಸ್ನೇಹಿತ ಗುರುರಾಜ ಬಿರಾದಾರ್ ನಾಪತ್ತೆಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಆಸ್ತಿ ವಿಚಾರಕ್ಕೆ ಹಾಗೂ ಅನೈತಿಕ ಸಂಭಂದಕ್ಕೆ ಅಡ್ಡಿಯಾದ ಎಂಬ ಕಾರಣಕ್ಕೆ ಹೆತ್ತ ತಂದೆಯನ್ನು ಕೊಲ್ಲುವದು ಎಷ್ಟರ ಮಟ್ಟಿಗೆ, ಈಕೆಯ ಕಠಿಣ ಶಿಕ್ಷೆ ಆಗಬೇಕು ಎಂದು ಪ್ರಜ್ಞಾವಂತರು ಒತ್ತಾಯ ಮಾಡಿದ್ದಾರೆ…