ಮೋಳೆ :

ಕಳೆದ ಐದು ದಿನಗಳಿಂದ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಜಿನ ಮಂದಿರದಲ್ಲಿ ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ಶಿಬಿರ ಜ್ಞಾನ ಆಯೋಜನೆ ಮಾಡಲಾಗಿದೆ.

ಕಳೆದ ಐದು ದಿನಗಳಿಂದ ಈ ಕಾರ್ಯಕ್ರಮವನ್ನ ಗ್ರಾಮದ ಜೈನ ಮಹಿಳಾ ಮಂಡಳದ ವತಿಯಿಂದ ಆಯೋಜನೆ ಮಾಡಲಾಗಿದ್ದು ಈ ಕಾರ್ಯಕ್ರಮದಲ್ಲಿ ಅಷ್ಟದ್ರವ್ಯಗಳಿಂದ ಮಕ್ಕಳಿಗೆ ಪೂಜಾರ್ಚನೆ, ಜೈನ ಧರ್ಮದ ಬಗ್ಗೆ ಪಾಠ ಬೋದನೆ, ಜೈನ ಸಂಸ್ಕಾರ ಬಗ್ಗೆ ಬೋದನೆ, ಹೀಗೆ ಇನ್ನಿತರ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನ ಆಯೋಜನೆ ಮಾಡಲಾಗಿತ್ತು ಶುಕ್ರವಾರ ಕೊನೆಯ ದಿನದಂದು ಮಕ್ಕಳಿಗೆ ಪರೀಕ್ಷೆ ನಡೆಸಿ ಮಕ್ಕಳಿಗೆ ಪ್ರಶಸ್ತಿ ಪತ್ರದ ಜೊತೆಗೆ ಬಹುಮಾನ ನೀಡಿ ಮಕ್ಕಳಿಗೆ ಗೌರವಿಸಲಾಯಿತು.

ಈ ಸಂಧರ್ಭದಲ್ಲಿ ಕಮೀಟಿ ಅಧ್ಯಕ್ಷ ಸೀತಲ‌ ಯರಂಡೊಲಿ, ಗ್ರಾಪಂ ಸದಸ್ಯರಾದ ಅಲಖಾ ಕೌಲಗಿ, ಬುಜಭಲಿ ಬೊರಗಾಂವೆ, ಪಂಡಿತ ಸಿದ್ದಪ್ಪ ಉಪಾಧ್ಯ ಹಾಗೂ ಜೈನ ಸಮಾಜದ ಶ್ರಾವಕ ಶ್ರಾವಿಕರು ಉಪಸ್ಥಿತರಿದ್ದರು.