ಬೆಳಗಾವಿ :

ಮಡ್ಡಿ ಭಾಗದ ಜನರಿಗೆ ಅನಕೂಲವಾಗಲಿ ಆ ಗ್ರಾಮಕ್ಕೂ ಸಹ ನೀರಾವರಿ ಆಗಲಿ ಎನ್ನುವ ಉದ್ದೇಶದಿಂದ ಸರ್ಕಾರ ಕಳೆದ ಐದು ವರ್ಷಗಳ ಹಿಂದೆ ಬಸವೇಶ್ವರ ಏತ ನೀರಾವರಿ ಯೋಜನೆಗೆ ಗುದ್ದಲಿ ಪೂಜೆ ಮಾಡಿದೆ. ಆದರೆ, ಈ ಗ್ರಾಮಕ್ಕೆ ನೀರು ಇಲ್ಲ ಇಕಡೆ ಉಳಿಮೆಗೆ ಜಮೀನು ಇಲ್ಲ. ಕಾಮಗಾರಿ ಎಲ್ಲವೂ ಕಳಪೆಯಾಗಿದೆ. ಸ್ಥಳೀಯ ಶಾಸಕರಾದ ಮಹೇಶ ಕುಮಟಳ್ಳಿ ಹಾಗೂ ಶ್ರೀಮಂತ ಪಾಟೀಲ ಅವರ ಮತಕ್ಷೇತ್ರಗಳಾದ ಅಥಣಿ ಹಾಗೂ ಕಾಗವಾಡ ತಾಲೂಕಿನ 22 ಗ್ರಾಮದ ಜನರು ಕಳೆದ ಐದು ವರ್ಷಗಳಿಂದ ಕಷ್ಟದಲ್ಲಿ ಜೀವನ ಸಾಗಿಸುವಂತಾಗಿದೆ.‌ ಸ್ಥಳೀಯ ಶಾಸಕರಿಗೆ ಇಲ್ಲದ ಕಾಳಜಿ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಎಲ್ಲಿಂದ ಬರಬೇಕು.

ಕಳಪೆ ಕಾಮಗಾರಿ

ಹೌದು ಬಸವೇಶ್ವರ ಏತ ನೀರಾವರಿ ಯೋಜನೆಯಡಿ ಬೆಳಗಾವಿ ಜಿಲ್ಲೆಯ ಕಾಗವಾಡ ಹಾಗೂ ಅಥಣಿ ತಾಲೂಕಿನ ಬರಗಾಲದಿಂದ ತತ್ತರಿಸಿರುವ 22 ಗ್ರಾಮಗಳಿಗೆ ಸುಮಾರು 1,200 ಕೋಟಿ ಗೂ ಹೆಚ್ಚು ವೆಚ್ಚದಲ್ಲಿ 67,859 ಎಕರೆ ಜಮೀನಿಗೆ ನೀರು ಹರಿಸುವ ಬಸವೇಶ್ವರ ಏತ ನೀರಾವರಿ‌ ಯೋಜನೆ ಕಳೆದ ಐದು ವರ್ಷಗಳಿಂದ ಕಾಮಗಾರಿ‌ ನಡೆಯುತ್ತಲಿದೆಯೆ ಹೊರೆತು ಇನ್ನೂ ವರೆಗೂ ಮುಗಿಯುವ ಹಂತ ತಲುಪಿಲ್ಲ. ಅಥಣಿ‌‌ ಶಾಸಕ‌ ಮಹೇಶ ಕುಮಟಳ್ಳಿ ಹಾಗೂ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅವರ ನಿರ್ಲಕ್ಷ್ಯದಿಂದ ಕಾಮಗಾರಿ ಸಂಪೂರ್ಣವಾಗಿ ಕಳಪೆಯಾಗಿದೆ. ಜಿಲ್ಲೆಯವರೆ ಆದ ರಮೇಶ ಜಾರಕಿಹೊಳಿ ಅವರು ನೀರಾವರಿ ಸಚಿವರಾಗಿದ್ದಾಗ ಆಗಾಗ ಕಾಮಗಾರಿ‌ ಪರಶೀಲನೆ ಮಾಡುತ್ತಿದ್ದರು. ಅದರೆ, ಸದ್ಯ ಗೋವಿಂದ ಕಾರಜೋಳ ನೀರಾವರಿ ಸಚಿವರಾದ ಬಳಿಕ ಬಸವೇಶ್ವರ ಏತ ನೀರಾವರಿ ಯೋಜನೆ ಆಮೆಗತಿಯಲ್ಲಿ ನಡೆಯುತ್ತಿದ್ದು ಕಳೆದ ಐದು ವರ್ಷಗಳಿಂದ ಕಾಮಗಾರಿ ನಡೆಯುತ್ತಲಿದೆ. ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಬೇಕಿದ್ದ ಕಾಮಕಾರಿ ಇನ್ನೂ ಪೂರ್ಣಗೊಂಡಿಲ್ಲ. ಸ್ಥಳೀಯ ಶಾಸಕರ ನಿರ್ಲಕ್ಷ್ಯದಿಂದ 22 ಗ್ರಾಮದ ರೈತರು ಜಮೀನುಗಳಲ್ಲಿ ಕಳೆದ ಐದು ವರ್ಷಗಳ ಹಿಂದೆ ಜಮೀನುಗಳಲ್ಲಿ ತಗ್ಗು ತೆಗೆದು ಬಿಟ್ಟ ಪರಿಣಾಮ ಜಮೀನುಗಳು ಬಿತ್ತನೆಗೆ ಯೋಗ್ಯವಿಲ್ಲ.

ಅರ್ಧಕ್ಕೆ ನಿಂತ ಕಾಮಗಾರಿ

2017 ಜುಲೈನಲ್ಲಿ ಅಥಣಿ ತಾಲೂಕಿನ ಮಧಬಾವಿ ಗ್ರಾಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕಾಗವಾಡ ಮಾಜಿ ಶಾಸಕ ರಾಜು ಕಾಗೆ, ಮಾಜಿ ಜಲಸಂಪನ್ಮೂಲ ಸಚಿವ ಎಂ‌ ಬಿ ಪಾಟೀಲ, ಮಾಜಿ ಸಚಿವ ರಮೇಶ ಜಾರಕಿಹೊಳಿ, ಮಾಜಿ ಸಂಸದ ಪ್ರಕಾಶ ಹುಕ್ಕೇರಿ, ಮಾಜಿ ಶಾಸಕ ಶಹಜಹಾನ ಡೊಂಗರಗಾಂವ ನೇತೃತ್ವದಲ್ಲಿ ಶಂಕು ಸ್ಥಾಪನೆ ನೆರವೇರಿಸಲಾಗಿತ್ತು. ಈ ಯೋಜನೆಯಿಂದ ಕಾಗವಾಡ ಹಾಗೂ ಅಥಣಿ ತಾಲೂಕಿನ ಮದಭಾವಿ, ಹಣಮಾಪೂರ, ತೆವರಟ್ಟಿ, ಜಂಬಗಿ, ಅರಳಟ್ಟಿ, ಬೊಮ್ಮನಾಳ, ಸಂಬರಗಿ, ಕಲ್ಲೂತಿ, ಶಿವನೂರ, ಮಸರಗುಪ್ಪಿ, ಶಿರೂರ, ಪಾಂಡೇಗಾಂವ, ಖಿಳೇಗಾಂವ, ಅಜೂರ, ನಾಗನೂರ ಪಿ.ಎ, ತಾಂವಶಿ, ಕಿರಣಗಿ, ಬೇವನೂರ, ಅನಂತಪೂರ, ಮಲಾಬಾದ, ಬಳ್ಳಿಗೇರಿ, ಗುಂಡೇವಾಡಿ ಗ್ರಾಮಗಳು ನೀರಾವರಿ ಪಡೆಯಲಿವೆ. ಆದರೆ, ಸರ್ಕಾರದ ನಿರ್ಲಕ್ಯತನ ಹಾಗೂ ಭೂ ಸ್ವಾಧೀನ ಹಣ ರೈತರಿಗೆ ಬರದೆ ಇರುವುದರಿಂದ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಕಾಮಗಾರಿ ಕೆಲಸ ಇನ್ನೂ 30% ಕ್ಕೂ ಹೆಚ್ವು ಪ್ರತಿಷತ ಇರುವುದರಿಂದ ಈ ಭಾಗದ ರೈತರು ಕಳೆದ ಐದು ವರ್ಷಗಳಿಂದ ಇಲ್ಲಿನ ರೈತರಿಗೆ ಬೆಳೆ ಬೆಳೆಯಲು ಅಸಾಧ್ಯವಾಗಿದ್ದು, ಈ ಬಗ್ಗೆ ಜನಪ್ರತಿನಿಧಿ ಹಾಗೂ ಅಧಿಕಾರಿಗಳನ್ನ ಕೇಳಿದರೆ ಕೊರೊನಾ ಕುಂಟು ನೆಪ ಹೇಳುತ್ತಾರೆ. ಸ್ಥಳೀಯವಾಗಿ ಬಸವೇಶ್ವರ ಏತ ನೀರಾವರಿ ಯೋಜನೆ ಅಧಿಕಾರಿಗಳ ಕಚೇರಿ ಇಲ್ಲ ಕುಂದು ಕೊರತೆಗಳನ್ನ ಅಧಿಕಾರಿಗಳ ಜೊತೆ ಚರ್ಚೆ ಮಾಡಬೇಕೆಂದರೆ ವಿಶೇಷ ಭೂ ಸ್ವಾಧಿನ ಅಧಿಕಾರಿಗಳ ಕಚೇರಿ ಬಾಗಲಕೋಟೆಯಲ್ಲಿ ಇರುವುದರಿಂದ ಈ ಭಾಗದ ರೈತರಿಗೆ ಅನಾನಕೂಲವಾಗಿದೆ.

ಅರ್ಧಕ್ಕೆ ನಿಂತ ಕಾಮಗಾರಿ

ಒಟ್ಟಿನಲ್ಲಿ ಮೂರು ವರ್ಷದಲ್ಲಿ ಮುಗಿಯಬೇಕಿದ್ದ ಕಾಮಗಾರಿ ಐದು ವರ್ಷ ಕಳೆದರೂ ಬಸವೇಶ್ವರ ಯಾತ ನೀರಾವರಿ ಯೋಜನೆ ಮುಗಿಯದೆ ಇರುವುದರಿಂದ 22 ಗ್ರಾಮದ ರೈತರು ಕಷ್ಟ ಅನುಭವಿಸುವಂತ ಪ್ರಸಂಗ ಎದುರಾಗಿದ್ದು ಇದ್ದ ಅಲ್ಪ ಸಲ್ಪ ಜಮೀನು ಕಾಲುವೆ ನಿರ್ಮಾಣಕ್ಕೆ ಹೋಗಿದ್ದು ಆದಷ್ಟು ಬೇಗ ಕಾಮಗಾರಿ‌ ಮುಗಿಸಿ ಈ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಬೇಕಿದೆ.

ವರದಿ : ಪಾರ್ಶನಾಥ ಶೆಟ್ಟಿ