ಕಾಗವಾಡ :

ಕರ್ನಾಟಕದಲ್ಲಿ ಈಗಾಗಲೇ 66 ನೇ ಕರ್ನಾಟಕ ರಾಜೋತ್ಸವ ಆಚರಿಸಲಾಗುತ್ತಿದೆ. ಆದರೆ, ಇಲ್ಲೊಂದು ಗ್ರಾಮದಲ್ಲಿ ನವೆಂಬರ 1 ರಂದು ಇದೇ ಮೊದಲ ಬಾರಿಗೆ ಕನ್ನಡ ರಾಜೋತ್ಸವ ಆಚರಣೆ ಮಾಡುವುದರ ಮೂಲಕ ಈ ಗ್ರಾಮದಲ್ಲಿ ಒಂದು ಹೊಸ ಇತಿಹಾಸ ನಿರ್ಮಾಣ ಮಾಡಲಾಗಿದೆ‌. ಅದು ಯಾವ ಗ್ರಾಮ ಅಂತೀರಾ ಈ ಸ್ಟೋರಿ ನೋಡಿ

ಹೌದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದ ವ್ಯಾಪ್ತಿಗೆ ಒಳಪಡುವ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ 65 ವರ್ಷಗಳ ಬಳಿಕ 66ನೇ ಕನ್ನಡ ರಾಜ್ಯೋತ್ಸವ ಆಚರಿಸಿದ ಸ್ಥಳೀಯರು ಮಹಾರಾಷ್ಟ್ರ ಪ್ರದೇಶಕ್ಕೆ ಹೊಂದಿಕೊಂಡಿರುವ ಮಂಗಸೂಳಿ ಗ್ರಾಮದಲ್ಲಿ ಕಳೆದ 65 ವರ್ಷಗಳಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡದೇ ಕರಾಳ ದಿನಾಚರಣೆ ಮಾಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಮಂಗಸೂಳಿ ‌ಗ್ರಾಮದ ಬಹುತೇಕ ಅಂಗಡಿ ‌ಮುಂಗಟ್ಟುಗಳು ಓಪನ್ ಮಾಡಲಾಗಿದೆ. ಜಿಲ್ಲಾಡಳಿತದ ಕಟ್ಟುನಿಟ್ಟಿನ ಆದೇಶದಂತೆ ಕಾಗವಾಡ ತಹಶೀಲ್ದಾರರ ರಾಜೇಶ ಬುರ್ಲಿ ಹಾಗೂ ಅಥಣಿ ಸಿಪಿಐ ಶಂಕರಗೌಡ ಪಾಟೀಲ ನೇತೃತ್ವದಲ್ಲಿ ಮಂಗಸೂಳಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗಿದೆ.

ಪಜಿಲ್ಲಾಡಳಿತ, ತಾಲೂಕಾಡಳಿತ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳ ನಡೆಗೆ ಈ ಭಾಗದ ಕನ್ನಡ ಪ್ರೇಮಿಗಳಲ್ಲಿ‌ ಮಂದಹಾಸ ಮೂಡಿದೆ. ಆದ್ರೆ, ಕಳೆದ 65 ವರ್ಷಗಳಿಂದ ಕನ್ನಡ ರಾಜ್ಯೋತ್ಸವ ಆಚರಣೆ ದಿನವಾದ (ನ.೧)ರಂದು  ಮಂಗಸೂಳಿ ಗ್ರಾಮದಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗುತ್ತಿತ್ತು. ಈ ವರ್ಷ ಅದಕ್ಕೆ ಅಂತ್ಯ ಹಾಡಲಾಗಿದೆ. ಕಳೆದ‌ ಹಲವಾರು ವರ್ಷಗಳಿಂದ ಅಂಗಡಿ‌ ಮುಂಗಟ್ಟುಗಳನ್ನು ಬಂದ್ ಮಾಡಿ ಕರಾಳ ದಿನಾಚರಣೆ ಮುಂದಾಗುತ್ತಿದ್ದ ಜನರು ಇದೀಗ ಎಲ್ಲವನ್ನೂ ಮರೆತು ಅಂಗಡಿಗಳನ್ನು ಓಪನ್ ಮಾಡುವ ಮೂಲಕ ಕನ್ನಡ ರಾಜ್ಯೋತ್ಸವಕ್ಕೆ ಸಹಕಾರ ನೀಡಿದ್ದಾರೆ.

ಮಂಗಸೂಳಿ ಗ್ರಾಮದಲ್ಲಿ ನವೆಂಬರ್ ೧ ರಾಜ್ಯೋತ್ಸವ ದಿನದಂದು  ಮರಾಠಿಗರು ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಕರಾಳ ದಿನಾಚರಣೆ ಆಚರಿಸುವ ಮೂಲಕ ಉದ್ದಟತನ ಪ್ರದರ್ಶಿಸುತ್ತಿದ್ದರು. ಆದರೆ, ಈ ವರ್ಷ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿಯವರ ಆದೇಶದ ಮೇರೆಗೆ ಇಂದು ಕರ್ನಾಟಕ ರಾಜೋತ್ಸವ ಆಚರಿಸಲು ತಾಲೂಕಾಡಳಿತ ಯಶಸ್ವಿಯಾಗಿದೆ‌ ಮಂಗಸೂಳಿ ಗ್ರಾಮದಲ್ಲಿ ಇಂದು ಹೊಸ ಇತಿಹಾಸ ನಿರ್ಮಾಣವಾಗಿದ್ದು ಕಳೆದ 65 ವರ್ಷಗಳಿಂದ ಕೇವಲ ಕರ್ನಾಟಕ ರಾಜೋತ್ಸವ ಸರ್ಕಾರಿ ಕಚೇರಿಗಳಲ್ಲಿ ಮಾತ್ರ ಸೀಮಿತವಾಗಿದ್ದು, ಇಂದು ಕರ್ನಾಟಕ ರಾಜೋತ್ಸವ ಮಂಗಸೂಳಿ ಗ್ರಾಮದಲ್ಲಿ ವಿಜೃಂಭಣೆಯಿಂದ ಆಚರಣೆ ಮಾಡಿದ್ದು ಸ್ಥಳೀಯ ಕನ್ನಡ ಪ್ರೇಮಿಗಳಿಗೆ ಆನಂದ ಉಂಟು ಮಾಡಿದೆ