ಉ.ಕ ಸುದ್ದಿಜಾಲ ಕಾಗವಾಡ :
ಹೆತ್ತವಳಿಂದಲೇ ಹಸುಳೆಯ ಕೊಲೆ..! ತಾಯಿಯಿಂದ ಆತ್ಮಹತ್ಯೆಗೆ ಯತ್ನ..!!
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಖುರ್ದ ಪಟ್ಟಣ ಪಂಚಾಯತಿ ವ್ಯಾಪ್ತಿಯ ಫರೀದಖಾನವಾಡಿಯ ತೋಟದ ವಸ್ತಿಯಲ್ಲಿ ತಾಯಿಯೇ ತನ್ನ ಹೆತ್ತ ಕಂದಮ್ಮನನ್ನು ಕೊಲೆ ಮಾಡಿ, ತಾನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಇಂದು ಬೆಳಗಿನ ಜಾವ ಸಂಭವಿಸಿದೆ.
ಎರಡು ವರ್ಷ 9 ತಿಂಗಳಿನ ಸಾತ್ವಿಕ್ ರಾಹುಲ ಕಟಗೇರಿ ಎಂಬ ಮುದ್ದು ಕಂದಮ್ಮನಿಗೆ ಹೆತ್ತ ತಾಯಿಯೇ ಚಾಕು ಇರಿದು, ಬಳಿಕ ಕತ್ತು ಹಿಚುಕಿ ಕೊಲೆ ಮಾಡಿ, ತಾನು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ.
7 ವರ್ಷಗಳ ಹಿಂದೆ ರಾಹುಲ ಮಾರುತಿ ಕಟಗೇರಿ ಈತನು ಭಾಗ್ಯಶ್ರೀ ಎಂಬುವಳನ್ನು ಮದುವೆಯಾಗಿದ್ದು, ದಂಪತಿಗಳು ಫರೀದಖಾನವಾಡಿಯ ತೋಟದ ಮನೆಯಲ್ಲಿ ವಾಸಿಸುತ್ತಿದ್ದರು. ಕೌಟಂಬಿಕ ಕಲಹವೇ ಈ ಘಟನೆಗೆ ಕಾರಣವೆನ್ನಲಾಗುತ್ತಿದೆ. ಈಗಾಗಲೇ ಮಗುವಿನ ತಾಯಿ ಭಾಗ್ಯಶ್ರೀಯನ್ನ ಬಂಧಿಸಿದ ಕಾಗವಾಡ ಪೋಲಿಸರು.
ಸ್ಥಳಕ್ಕೆ ಬೆಳಗಾವಿ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಆರ್.ಎಸ್. ಬಸರಗಿ, ಡಿವೈಎಸ್‌ಪಿ ಪ್ರಶಾಂತ ಮುನ್ನೋಳಿ, ಸಿಪಿಐ ಸಂತೋಶ ಹಳ್ಳೂರ, ಪಿಎಸ್‌ಐ ಜಿ.ಜಿ. ಬಿರಾದರ, ಸಿಡಿಪಿಓ ಸಂಜೀವಕುಮಾರ ಸದಲಗೆ ಭೇಟ್ಟಿ ನೀಡಿ, ಪರಿಶೀಲನೆ ಮಾಡಿ, ತನಿಖೆ ಕೈಗೊಂಡಿದ್ದಾರೆ.
ಈ ಕುರಿತು ಮೃತ ಬಾಲಕನ ತಂದೆ ರಾಹುಲ ಕಟಗೇರಿ ಕಾಗವಾಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತಾಯಿ ಭಾಗ್ಯಶ್ರೀ ಕಟಗೇರಿ ಇವಳನ್ನು ವಶಕ್ಕೆ ಪಡೆದು, ತನಿಖೆ ನಡೆಸುತ್ತಿದ್ದಾರೆ.